ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಾಲಕಿ ಮೇಲೆ ಅತ್ಯಾಚಾರ: ಖಂಡನೆ

Vishwanath S
Updated On : 22 Apr 2013, 12:59 pm

ದೊಡ್ಡಬಳ್ಳಾಪುರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5 ವರ್ಷದ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ ಎಂದು ಮಾಜಿ ನಗರಸಭಾ ಸದಸ್ಯೆ ಪ್ರಮೀಳಾ ಮಹದೇವ್ ಖಂಡಿಸಿದ್ದಾರೆ. ದೇಶದಲ್ಲಿ ಈ ಬಗೆಯ ಕೃತ್ಯಗಳು ಪದೇ ಪದೇ ನಡೆಯುತ್ತಿದ್ದರೂ ಕಾನೂನು ಪರಿಪಾಲಕರು, ರಾಜಕಾರಣಿಗಳು ಮತ್ತು ಆಡಳಿತ ವ್ಯವಸ್ಥೆ ವಹಿಸಿರುವ ದಿವ್ಯಮೌನ, ಹೊಣೆಗೇಡಿತನ ಖಂಡನೀಯ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಯಾವುದೇ ಕಾರಣಕ್ಕೂ ಇಂತಹ ಕಾಮುಕರಿಗೆ ಕ್ಷಮಾದಾನ ನೀಡಬಾರದು. ಕಠಿಣ ಕಾನೂನು ರೂಪಿಸದ ಹೊರತು ಈ ಬಗೆಯ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎನ್ನುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಪಘಾತ: ಇಬ್ಬರ ಸಾವು
ಹೊಸಕೋಟೆ: ಎರಡು ಪ್ರತ್ಯೇಕ ಅಪಘಾತದಲ್ಲಿ  ಇಬ್ಬರು ವ್ಯಕ್ತಿಗಳು ಮೃತ ಪಟ್ಟು ಮತ್ತಿಬ್ಬರು ಗಾಯಗೊಂಡಿದ್ದಾರೆ. ಮಾಲೂರು ರಸ್ತೆಯ ಕರಬೀರನ ಹೊಸಹಳ್ಳಿ ಬಳಿ ಬೈಕ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಬೃಕ್ ಸವಾರ ಡಿ.ಶೆಟ್ಟಿಹಳಿಯ ಮಂಜುನಾಥ (24) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ನಿಂಬೆಕಾಯಿಪುರದ ಹರ್ಷವರ್ಧನ ಎಂಬಾತನ ಕಾಲು ಮೂಳೆ ಮುರಿದಿದ್ದು ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೋಲಾರ ರಸ್ತೆಯ ಅಲಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿ ಹೊಡೆದ ಕಾರಣ ತೀವ್ರ ಗಾಯಗೊಂಡ ಬೃಕ್ ಸವಾರ ಮೃಲಾಪುರದ ಮುನಿರಾಜು (40) ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಎನ್.ವೆಂಕಟೇಶ್ ಅವರಿಗೂ ಗಾಯಗಳಾಗಿವೆ. ಗಾರೆ ವೃತ್ತಿ ಮಾಡುತ್ತಿದ್ದ ಮುನಿರಾಜು ಹೊಸಕೋಟೆಯಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಹೋಗುತ್ತಿದ್ದರು. ಹೊಸಕೋಟೆ ಪೊಲೀಸರು ಎರಡೂ ಪ್ರಕರಣ ದಾಖಲಿಸಿದ್ದಾರೆ. 

ವಿಷ ಸೇವಿಸಿದ್ದ ಮಹಿಳೆ ಸಾವು
ಹೊಸಕೋಟೆ: ಕ್ರಿಮಿನಾಶಕ ಸೇವಿಸಿ ರಾಮಮೂರ್ತಿ ನಗರದ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.  ಕಣೇಕಲ್ ಗ್ರಾಮದ ಮಮತಾ (27) ಮೃತ ಪಟ್ಟವರು. 11 ವರ್ಷದ ಕೆಳಗೆ ಮಂಜುನಾಥ ಎಂಬುವವರ ಜೊತೆ ಆಕೆಯ ವಿವಾಹವಾಗಿದ್ದು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement