ಓಟು ಮಾರಾಟಕ್ಕಲ್ಲ ಎಂಬುದು ಸಾಧಿಸಿ: ಪ್ರೊ.ಕೇಶವಮೂರ್ತಿ
ಕ.ಪ್ರ.ವಾರ್ತೆ , ಮಂಡ್ಯ , ಏ.22
ನೀತಿಗೆಟ್ಟ ರಾಜಕೀಯ ವ್ಯವಸ್ಥೆಗೆ ಓಟನ್ನು ಮಾರಿಕೊಳ್ಳದವರು ಇದ್ದಾರೆ ಎಂಬುದನ್ನು ತೋರಿಸುವ ಅಗತ್ಯವಿದೆ ಎಂದು ಹಿರಿಯ ಚಿಂತಕ ಪ್ರೊ. ಎಚ್.ಎಲ್. ಕೇಶವಮೂರ್ತಿ ಹೇಳಿದರು.
ನಗರದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಹಮ್ಮಿಕೊಂಡಿದ್ದ 'ಚುನಾವಣಾ ಕಾಲವು ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡುವ ಕಾಲ' ಎಂಬ ಬೈಕ್ ರ್ಯಾಲಿ ವೇಳೆ ಮಾತನಾಡಿದ ಅವರು, ಓಟು ಮಾರಿಕೊಳ್ಳದವರೂ ಮಂಡ್ಯದಲ್ಲಿ ಇದ್ದಾರೆ. ನಮ್ಮ ಓಟು ಕೇಳುವ ಮುನ್ನ ನಮ್ಮ ಪ್ರಶ್ನೆಗೆ ಉತ್ತರ ಕೊಡಿ ಎನ್ನುವ ಈ ವಿನೂತನ ಕಾರ್ಯಕ್ರಮವು ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯವಾಗಿದೆ ಎಂದರು. ನಮ್ಮದೇ ಸಂಪತ್ತನ್ನು ಲೂಟಿ ಹೊಡೆದ ರಾಜಕಾರಣಿಗಳು ಚುನಾವಣೆ ಕಾಲದಲ್ಲಿ 500, 1000 ನೋಟು ಹಿಡಿದು ಬರುತ್ತಾರೆ. ಆ ಹಣ ತೆಗೆದುಕೊಳ್ಳುವುದು ಮಾತ್ರವಲ, ಕೊಡುತ್ತಿದ್ದಾಗ ಸುಮ್ಮನಿರುವುದೂ, ಇಂತಹ ಕ್ರಿಯೆಗೆ ಪ್ರೋತ್ಸಾಹ ಕೊಟ್ಟಂತೆ ಆಗಿದೆ ಎಂದು ಹೇಳಿದರು.
ಕರ್ನಾಟಕ ಜನಶಕ್ತಿ, ಮಂಡ್ಯ ನಗರ ಸ್ಲಂ ನಿವಾಸಿಗಳ ಒಕ್ಕೂಟ, ವಿವೇಕ, ಕಾರ್ಮಿಕ ಸಂಘಟನೆಗಳು, ಇನ್ನಿತರ ಪ್ರಜ್ಞಾವಂತರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮವು ರಾಜ್ಯದಲ್ಲೇ ಅನನ್ಯವಾದುದು ಎಂದು ಹಿರಿಯ ವಕೀಲ ಬಿ.ಟಿ. ವಿಶ್ವನಾಥ್ ಹೇಳಿದರು.
ಯಾವ ಪ್ರಶ್ನೆಯನ್ನೂ ಕೇಳದೇ ಓಟು ಹಾಕುತ್ತಿರುವುದರಿಂದ ರಾಜಕಾರಣಿಗಳು ಇದೇ ಸರಿಯಾದ ದಾರಿ ಎಂದರು.