ಕಾಂಗ್ರೆಸ್ನಿಂದ ಬಡವರ ಬಾಳು ಹಸನು: ಮಂಜು
ಕ.ಪ್ರ.ವಾರ್ತೆ , ಮಾಗಡಿ , ಏ.22
ಬಡವರ ಬಾಳು ಹಸನಾಗುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಹೇಳಿದರು.
ಅವರು ಸೋಮವಾರ ಹಂಚೀಕುಪ್ಪೆ ಮತ್ತು ಅಜ್ಜನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಅತ್ತಿಂಗೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ಬಡವರ ಪರವಾಗಿದೆ. ಬಡವರಿಗೆ ಸಾಮಾಜಿಕ ನ್ಯಾಯವನ್ನು ಕೊಟ್ಟಂತಹ ಪಕ್ಷ ಈ ಬಾರಿ ನನ್ನನ್ನು ಗೆಲ್ಲಿಸಿದರೆ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.
ಈ ಜುಟ್ಟನಹಳ್ಳಿ ಜಯರಾಮು, ಕೆ.ಎಚ್.ಕೃಷ್ಣಮೂರ್ತಿ, ಸಿ. ಜಯರಾಮು, ನಾಗರಾಜು, ದೊಡ್ಡಯ್ಯ, ವಕೀಲ ಶಿವಣ್ಣ, ತಗಚಕುಪ್ಪೆ ನರಸಿಂಹಯ್ಯ,ಪಂಚಲಿಂಗಯ್ಯ, ನಂಜುಂಡಯ್ಯ ಇತರರು ಇದ್ದರು.