ಚಿಕ್ಕತಿರುಪತಿ ಪ್ರಸನ್ನ ವೆಂಕಟೇಶ್ವರ ಬ್ರಹ್ಮರಥೋತ್ಸವ
ಮಾಲೂರು: ತಾಲೂಕಿನ ಚಿಕ್ಕತಿರುಪತಿಯ ಪುರಾಣ ಪ್ರಸಿದ್ಧಿ ಪ್ರಸನ್ನ ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸೋಮವಾರನಡೆಯಿತು.ಬೆಳಿಗ್ಗಿನಿಂದಲೇ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುತ್ತ ಮುತ್ತಲ ಗ್ರಾಮಗಳು ಸೇರಿದಂತೆ ಪಕ್ಕದ ತಮಿಳುನಾಡುಗಳಿಂದ ಬಂದ ಸಾವಿರಾರು ಭಕ್ತಾಧಿಗಳು ಬ್ರಹ್ಮ ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ತಮ್ಮ ಹರಕೆ ತೀರಿಸಿಕೊಂಡರು. ಸುತ್ತ ಮುತ್ತಲ ಗ್ರಾಮಸ್ಥರು ತಮ್ಮ ಎತ್ತಿನ ಗಾಡಿಯಲ್ಲಿ ಸ್ವಾಮಿಯ ದರ್ಶನಕ್ಕೆ ಬಂದ ಭಕ್ತಾಧಿಗಳಿಗೆ ಪಾನಕ-ಕೋಸಂಬರಿ-ಮಜ್ಜಿಗೆ ವಿತರಿಸಿದರು.
ಶಾಸಕ ಕೃಷ್ಣಯ್ಯ ಶೆಟ್ಟಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೃಷ್ಣಾರೆಡ್ಡಿ,,ಕೋಡಿಹಳ್ಳಿ ಕೃಷ್ಣಾರೆಡ್ಡಿ, ಜಿ.ಪಂ.ಸದಸ್ಯೆ ಯಲ್ಲಮ್ಮ, ರಾಮಸ್ವಾಮಿರೆಡ್ಡಿ, ಜೆಡಿಎಸ್ ಮುಖಂಡ ಕೆ.ಎಸ್.ಮಂಜುನಾಥ್‌ಗೌಡ ಚಂದ್ರಶೇಖರ್‌ಗೌಡ, ಲಕ್ಕೂರು ಸುರೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.