ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೆಣ್ಣು ಹುಲಿ ಸಾವು

Vishwanath S
Updated On : 23 Apr 2013, 2:10 am

ಆನೇಕಲ್ಲು: ಬನ್ನೇರುಘಟ್ಟ ಉದ್ಯಾನವನದಲ್ಲಿದ ಎರಡು ವರ್ಷದ ಹೆಣ್ಣು ಹುಲಿ ಝೂಬಿ ಮೃತಪಟ್ಟಿರುವುದಾಗಿ ನಿರ್ದೇಶಕ ಎನ್.ದೇವರಾಜು ತಿಳಿಸಿದ್ದಾರೆ. ಝೂಬಿ ಹುಟ್ಟಿದಾರಭ್ಯ ನರ ದೌರ್ಬಲ್ಯದಿಂದ ನರಳುತಿತ್ತು. ಉದ್ಯಾನದ ವೈದ್ಯರ ಜೊತೆಗೆ ಪಶು ವೈದ್ಯಕಾಲೇಜಿನ ವೈದ್ಯರು ಮತ್ತು ತಜ್ಞರು ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಹುಲಿಯ ದೇಹದ ಅಂಗಾಂಗಗಳ ಕೆಲವು ಭಾಗಗಳನ್ನು ಬಯಾಪ್ಸಿ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಹೆಬ್ಬಾಳದ ಇಂಡಿಯನ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ ಸಂಸ್ಥೆಗೆ ರವಾನಿಸಲಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎನ್.ದೇವರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement