ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೊಸತನದ ಅಭಾವದಿಂದ ಸೊರಗುತ್ತಿರುವ ರಂಗಭೂಮಿ

Vishwanath S
Updated On : 23 Apr 2013, 2:10 am

ಕ.ಪ್ರ. ವಾರ್ತೆ  ,   ದೊಡ್ಡಬಳ್ಳಾಪುರ  ,   ಏ.22
ಪೌರಾಣಿಕ ನಾಟಕ ಪ್ರಕಾರಗಳು ಹೊಸತನದ ಅಭಾವದಿಂದ ಸೊರಗುತ್ತಿವೆ. ಆದರೆ ಟಿವಿ ಮಾಧ್ಯಮದ ಅಬ್ಬರದ ನಡುವೆಯೂ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಗಮನೀಯ ಎಂದು ನಾಟಕರತ್ನ ಗುಬ್ಬಿವೀರಣ್ಣ ರಂಗಭೂಮಿ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಗುಬ್ಬಿ ವೀರೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಮೆಳೇಕೋಟೆ ಗ್ರಾಮದಲ್ಲಿ ರಾಮನವಮಿ ಅಂಗವಾಗಿ ಶ್ರೀರಾಮಾಂಜನೇಯ ಕೃಪಾಪೋಷಿತ ನಾಟಕ ಮಂಡಲಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಹವ್ಯಾಸಿ ಕಲಾವಿದರು ರಂಗಭೂಮಿಯನ್ನು ತಮ್ಮ ಆರ್ಥಿಕ ಸಂಕಷ್ಟಗಳ ನಡುವೆಯೂ ಜೀವಂತವಾಗಿಟ್ಟಿದ್ದಾರೆ ಎಂಬುದಕ್ಕೆ ಮೆಳೇಕೋಟೆಯಂತಹ ಗ್ರಾಮಗಳ ಹವ್ಯಾಸಿ ಕಲಾವಿದರು ನಿದರ್ಶನ ಎಂದ ಅವರು ನಾಟಕ ಪ್ರದರ್ಶನವನ್ನು ವೀಕ್ಷಿಸಿ, ವೃತ್ತಿ ರಂಗಭೂಮಿ ಕಲಾವಿದರಿಗೂ ಕಡಿಮೆ ಇಲ್ಲದಂತೆ ಪ್ರದರ್ಶನ ನೀಡಿದ ಕಲಾವಿದರನ್ನು ಅಭಿನಂದಿಸಿದರು.
ಗುಬ್ಬಿವೀರಣ್ಣ ಕಲಾವಿದರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರಬ್ಬನಹಳ್ಳಿ ಬಿ.ಕೆಂಪಣ್ಣ, ತಾ.ಉಪಾಧ್ಯಕ್ಷ ಎನ್.ಆಂಜನಪ್ಪ, ದೊಡ್‌ಡರಾಯಪ್ಪನಹಳ್ಳಿ ಶಿಕ್ಷಕ ಶಿವರುದ್ರಪ್ಪ, ನಾಟಕ ನಿರ್ದೇಶಕ ಸೋಮಶೆಟ್ಟಳ್ಳಿ ಕೆ.ಗೋಪಾಲ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement