ಹಿಂದೂ ಧರ್ಮಕ್ಕೆ ತನ್ನದೇ ಪರಂಪರೆ ಇದೆ
ಆನೇಕಲ್ಲು: ಸನಾತನ ಹಿಂದೂ ಧರ್ಮ ತನ್ನದೇ ಆದ ಮೌಲ್ಯಯುತ ಪರಂಪರೆಯನ್ನು ಹೊಂದಿದೆ. ಯುವ ಪೀಳಿಗೆ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಬಾಳಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಎಂ. ಚಿದಾನಂದಮೂರ್ತಿ ತಿಳಿಸಿದ್ದಾರೆ. ಅವರು ಆನೇಕಲ್ಲಿನ ರಾಮ ಸೇವಾ ಸಮಿತಿ ಟ್ರಸ್ಟ್ ಏರ್ಪಡಿಸಿರುವ ಶ್ರೀ ರಾಮ ನವಮಿ ಉತ್ಸವದಲ್ಲಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ. ಶ್ರೀ ರಾಮಚಂದ್ರನ ಪಿತೃವಾಕ್ಯ ಪರಿಪಾಲನೆ, ಏಕ ಪತ್ನೀ ವೃತ ಮುಂತಾದ ಗುಣಗಳು ಎಲ್ಲ ಕಾಲಘಟ್ಟದಲ್ಲಿಯೂ ಎಲ್ಲರೂ ಅನುಸರಿಸಬೇಕಾದ ಆದರ್ಶ ತತ್ವಗಳು ಎಂದರು.