ಡಿಕೆಶಿ ಕಾರ್ಯಾಲಯದ ಫ್ಲೆಕ್ಸ್, ಬ್ಯಾನರ್ಗಳ ತೆರವು
ಕನಕಪುರ: ಪಟ್ಟಣ ಹೊರವಲಯದ ನಿರ್ವಾಣೇಶ್ವರ ಬಡಾವಣೆಯಲ್ಲಿರುವ ಶಾಸಕ ಡಿ.ಕೆ. ಶಿವಕುಮಾರ್ರವರ ಚುನಾವಣಾ ಕಾರ್ಯಾಲಯದ ಆವರಣದಲ್ಲಿ ರಾರಾಜಿಸುತ್ತಿದ್ದ ಫ್ಲೆಕ್ಸ್, ಬ್ಯಾನರ್ಗಳನ್ನು ಪ್ರದರ್ಶಿಸಲು ಅನುಮತಿ ಪಡೆಯದೆ ನೀತಿಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾಧಿಕಾರಿಗಳು ತೆರವುಗೊಳಿಸಿದ್ದಾರೆ.
ಪುರಸಭಾ ವಾಹನಗಳಲ್ಲಿ ತುಂಬಿಕೊಂಡು ಹೋದ ಘಟನೆ ನಡೆದಿದೆ. ತಹಸೀಲ್ದಾರ್ ಡಾ.ದಾಕ್ಷಾಯಣಿ, ಪುರಸಭಾ ಮುಖ್ಯಾಧಿಕಾರಿ ಮಾಯಣ್ಣ ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.