ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭ್ರಷ್ಟ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣ

Rashmi Kasaragodu
Updated On : 25 Apr 2013, 10:46 am

ಕ.ಪ್ರ.ವಾರ್ತೆ  ರಾಮನಗರ  ಏ.24
ರಾಜ್ಯದಲ್ಲಿ ಕಡುಭ್ರಷ್ಟ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್‌ಮುಖಂಡರು ಕಾರಣ. ಉಭಯ ಪಕ್ಷಗಳ ಅರಾಜಕತೆಯಿಂದ ರಾಜ್ಯ ದಿವಾಳಿಯಾಗಿದೆ.  ಅಭಿವೃದ್ಧಿ, ಸುಭದ್ರ ಸರ್ಕಾರ ಮತ್ತು ಸಮರ್ಥ ಆಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೇಂದ್ರ ಸಚಿವ ಕೆ.ರೆಹಮಾನ್ ಖಾನ್ ಕರೆ ನೀಡಿದರು.
ನಗರದ ಜಿಯಾವುಲ್ಲಾ ಬ್ಲಾಕ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿದೇವರು ಪರ ಪ್ರಚಾರ ನಡೆಸಿದ ಅವರು, ಜ್ಯಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಕೋಮುವಾದಿ ಬಿಜೆಪಿ ಜತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಜನತೆಯನ್ನು ವಂಚಿಸಿದೆ ಎಂದು ಟೀಕಿಸಿದರು.
20 ತಿಂಗಳು ಅಧಿಕಾರ ಅನುಭವಿಸಿದ ಕುಮಾರಸ್ವಾಮಿ ವಚನಭ್ರಷ್ಟ ಆಗಿದ್ದರ ಫಲವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆ ಪಕ್ಷದಲ್ಲಿ ಮುಖ್ಯಮಂತ್ರಿ ಸಹಿತ ಹಲವು ಸಚಿವರು, ಧುರೀಣರು ಜೈಲಿಗೆ ಹೋಗಿದ್ದಾರೆ. ಗಣಿ ಸಹಿತ ರಾಜ್ಯದ ಸಂಪತ್ತು ಲೂಟಿಯಾಗಿದೆ ಎಂದರು.
ಭಾವೈಕ್ಯತೆಯ ಮಂತ್ರ: ಮುಸ್ಲಿಮರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಸಾಧ್ಯ. ಹಿಂದೂ-ಮುಸ್ಲಿಂ ಭಾವೈಕ್ಯತೆಯೇ ಕಾಂಗ್ರೆಸ್ ಮಂತ್ರ.  ಬಿಜೆಪಿಯಿಂದ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ ಎಂದು ರೆಹಮಾನ್ ಖಾನ್ ಟೀಕಿಸಿದರು.
ಈ ಭಾಗದಲ್ಲಿ ಪ್ರಾಬಲ್ಯ ಸಾಧಿಸಿರುವ ಕುಮಾರಸ್ವಾಮಿ ಮರು ಚುನಾವಣೆಗೆ ಕಾರಣಕರ್ತರಾಗಿದ್ದಾರೆ. 4 ವರ್ಷದಿಂದ ಸಂಸದರಾಗಿ ಕುಮಾರಸ್ವಾಮಿ ಕೇಂದ್ರ ಯೋಜನೆಗಳನ್ನು ಈ ಭಾಗದ ಜನತೆಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಅವರಿಗೆ ಈ ಬಾರಿ ತಕ್ಕಪಾಠ ಕಲಿಸಿ ಎಂದರು.
30-40 ಸ್ಥಾನಗಲ್ಲಷ್ಟೇ ಗೆಲುವು ಸಾಧಿಸುವ ಜೆಡಿಎಸ್ ರಾಜ್ಯದಲ್ಲಿ ಬ್ಲಾಕ್‌ಮೇಲ್ ರಾಜಕಾರಣ ಮಾಡಲು ಹವಣಿಸುತ್ತಿದೆ. ಒಂದು ವೇಳೆ ಅಧಿಕಾರ ಸಿಗುವುದಾದರೆ ಯಾರ ಜತೆಗಾದರೂ ಕೈ ಜೋಡಿಸಲು ಸಿದ್ಧ. ಅಲ್ಪ ಸಂಖ್ಯಾತರನ್ನು ಮತಬ್ಯಾಂಕ್ ಮಾಡಿಕೊಂಡಿದ್ದಾರಷ್ಟೇ ಎಂದು ಜರಿದರು.
ಪ್ರಚಾರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಒಬೇದುಲ್ಲಾ ಷರೀಫ್, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಅಭ್ಯರ್ಥಿ ಮರಿದೇವರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿಯಾವುಲ್ಲಾ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಮುಖಂಡರಾದ ಕೆ.ಶೇಷಾದ್ರಿ, ಆರಿಫ್ ಖುರೇಷಿ, ನಿಜಾಂ ಪಾಷ, ವೆಂಕಟೇಶ್, ಬಾಸಿದ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement