ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೆಂಕಟಸ್ವಾಮಿ ಪರ ಪುರಂದೇಶ್ವರಿ ಪ್ರಚಾರ

Rashmi Kasaragodu
Updated On : 25 Apr 2013, 10:46 am

ಕ.ಪ್ರ.ವಾರ್ತೆ  ದೇವನಹಳ್ಳಿ  ಏ.24
ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ವೆಂಕಟಸ್ವಾಮಿ ಪರವಾಗಿ ಕೇಂದ್ರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವೆ ಹಾಗೂ ಎನ್.ಟಿ.ಆರ್‌ರವರ ಪುತ್ರಿ ಪುರಂದೇಶ್ವರಿ ಬುಧವಾರ ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಪ್ರಚಾರ ಮಾಡಿದರು.
ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ. ಇವರ ಸರ್ಕಾರದಲ್ಲಿ 21 ಮಂದಿ ಕ್ರಿಮಿನಲ್ ಸಚಿವರು ಹಾಗೂ ಭ್ರಷ್ಟಾಚಾರದಿಂದ ಜೈಲು ಕಂಡವರಿದ್ದಾರೆ.  ಇಂತಹ ಭ್ರಷ್ಟ ಸರ್ಕಾರ ಬೇಕಾಗಿಲ್ಲ. ಮತದಾರರು ಯೋಚಿಸಿ ಯೋಗ್ಯರಾದವರಿಗೆ ಮತ ನೀಡಿರಿ. ಶಾಸಕರಾಗಿದ್ದ ವೆಂಕಟಸ್ವಾಮಿರವರು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ ಎಂದರು.
ಕೇಂದ್ರದ ಯುಪಿಎ ಸರ್ಕಾರ ಬಡವರು, ಮಹಿಳೆಯರಿಗಾಗಿ ಅಲ್ಲದೆ ಬಡ ವಿದ್ಯಾರ್ಥಿಗಳಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದೆ. ಪ.ಜಾತಿ ಮತ್ತು ಪ.ಪಂಗಡದವರಿಗಾಗಿ ವಿಶೇಷ ಸ್ಥಾನಮಾನ ನೀಡಿರುವುದು ಕಾಂಗ್ರೆಸ್. ಸೋನಿಯಾಗಾಂಧಿಯವರಾಗಲಿ, ರಾಜೀವ್‌ಗಾಂಧಿಯವರಾಗಲಿ ಎಂದೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಉತ್ತಮ ಅಧಿಕಾರ ನೀಡುವಂತಹ ಡಾ.ಮನಮೋಹನಸಿಂಗ್‌ರವರನ್ನು ಪ್ರಧಾನಿಯಾಗಿ ಮಾಡಿದ್ದಾರೆ ಎಂದರು.  
ಇದೇ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ರಾಜಣ್ಣರವರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಬಚ್ಚೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟಸ್ವಾಮಿರವರು ಮಾತನಾಡಿ, ಜಿಲ್ಲಾ ಕೇಂದ್ರವಾಗುವ ಎಲ್ಲ ಸೌಲಭ್ಯಗಳು ಇರುವ ದೇವನಹಳ್ಳಿಯೇ ಜಿಲ್ಲಾ ಕೇಂದ್ರವಾಗಬೇಕು ಎಂದರಲ್ಲದೆ ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ ಈಗ 85 ಕೈಗಾರಿಕೆಗಳು ಆರಂಭವಾಗಲಿದ್ದು ಎರಡು ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement