ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

13 ಲಕ್ಷ ಮೌಲ್ಯದ 43 ಸೆಟ್ ಸೋಲಾರ್ ದೀಪ ವಶ

Vishwanath S
Updated On : 26 Apr 2013, 1:00 am

ಕನಕಪುರ: ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿ ಬನ್ನಿಮುಕ್ಕೋಡ್ಲು ಗ್ರಾಮದಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಜನರಿಗೆ ಹಂಚಲು ತಂದಿದ್ದ 13 ಲಕ್ಷ ಮೌಲ್ಯದ 43 ಸೆಟ್ ಸೋಲಾರ್ ದೀಪಗಳನ್ನು ತುಂಬಿದ್ದ ಲಾರಿಯನ್ನು ಸಾರ್ವಜನಿಕರೇ ಹಿಡಿದು ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಘಟನೆ ವರದಿಯಾಗಿದೆ.
 ಜಿಪಂ ಸದಸ್ಯರೆಂದು ಹೇಳಲಾದ ಪ್ರಭಾವೀ ವ್ಯಕ್ತಿಯೋರ್ವರ ಮನೆಯಲ್ಲಿ 20 ಸೋಲಾರ್ ಸೆಟ್‌ಗಳನ್ನು ಇಳಿಸಿ, ಮಿಕ್ಕ 23 ಸೆಟ್‌ಗಳನ್ನು ಮತ್ತೊಬ್ಬ ಜಿಪಂ ಸದಸ್ಯರಿಗೆ ವಿತರಿಸಲು ಕೊಂಡೊಯ್ಯುತ್ತಿರುವುದಾಗಿ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
 ಬೆಂಗಳೂರು ಜಿಲ್ಲಾ ಪಂಚಾಯತ್ ನಾಗರಿಕ ಸೌಲಭ್ಯದ ಹೆಸರಿನಲ್ಲಿ ಸ್ಥಳೀಯ ಜಿಪಂ ಕಾರ್ಯನಿರ್ವಾಹಕ ಅಭಿಯಂತರರ ಆದೇಶದಂತೆ ವಿತರಿಸಲು ಹೊರಟಿರುವುದಾಗಿ ಹೇಳಿದ್ದ ಚಾಲಕ ಪೊಲೀಸರ ವಿಚಾರಣೆ ವೇಳೆಯಲ್ಲಿ ತನ್ನ ಹೇಳಿಕೆಯನ್ನು ಮಾರ್ಪಡಿಸಿ ಜಿಪಂ ಸದಸ್ಯರೊಬ್ಬರ ಆದೇಶದಂತೆ ಬನ್ನಿಮುಕ್ಕೋಡ್ಲು ಗ್ರಾಮದ ಮನೆಗೆ ತಲುಪಿಸುತ್ತಿರುವದಾಗಿ ಹೇಳಿದ್ದಾನೆ. ಗ್ರಾಮದಲ್ಲಿ ಸೋಲಾರ್ ಲೈಟ್ ಸೆಟ್‌ಗಳನ್ನು ಇಳಿಸುತ್ತಿದ್ದಾಗ ಸಾರ್ವಜನಿಕರು ಅನುಮಾನದಿಂದ ಹಿಡಿದು ಚುನಾವಣಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಚಾಲಕ ಪುನೀತ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಚುನಾವಣಾಧಿಕಾರಿ ನಾಗರಾಜ್ ಕೂಡಾ ಸದರಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement