ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಮುನ್ನುಗ್ಗಿ: ದೇವೇಗೌಡ

Vishwanath S
Updated On : 26 Apr 2013, 12:02 pm

ನೆಲಮಂಗಲ: ಟೀಕೆ ಮಾಡುವವರಿಗೆ ಹಿಂಜರಿಯದೆ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಕಾರ್ಯಕರ್ತರು ಶ್ರಮ ವಹಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಅವರು ಬುಧವಾರ ಪಟ್ಟಣದ ಜಾತ್ಯತೀತ ಜನತಾ ದಳದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಚುನಾವಣಾಧಿಕಾರಿಗಳು ಸೂಚನೆ ನೀಡಿರುವ ವ್ಯಾಪ್ತಿಯೊಳಗೆ ಅಭ್ಯರ್ಥಿಗಳು ಚುನಾವಣಾ ಪ್ರಚಾರ ನಡೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಬಾರದು. ಪಕ್ಷದ ಗೆಲುವಿಗೆ ಕಾರ್ಯಕರ್ತರು ನಿಷ್ಠೆ ಪ್ರಾಮಾಣಿಕತೆಯಿಂದ ಜನರಿಗೆ ಪಕ್ಷದ ಕಾರ್ಯ ಸಾಧನೆಗಳ ಅರಿವು ಮೂಡಿಸಬೇಕು ಎಂದರು.
ನೆಲಮಂಗಲ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಸ್ಥಳೀಯ ಜೆ.ಡಿ.ಎಸ್ ನಾಯಕರ ಆಯ್ಕೆಯ ಅಭ್ಯರ್ಥಿ ಅವರಿಗೆ ನೀವೆಲ್ಲಾ ಬೆಂಬಲ ವ್ಯಕ್ತಪಡಿಸಬೇಕು ಎಂದು ನುಡಿದರು.
ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ, ಎಂ.ಎಲ್.ಸಿ.ಇ.ಕೃಷ್ಣಪ್ಪ, ಮುಖಂಡ ಕೇಶವಮೂರ್ತಿ, ಜಿ.ಪಂ.ಸದಸ್ಯ ಬಿ.ಎಂ.ಎಲ್.ಕೃಷ್ಣಪ್ಪ ಮುಖಂಡರಾದ ಸಂಪತ್‌ಕುಮಾರ್, ಗಂಗಣ್ಣ, ದೇಗನಹಳ್ಳಿ ಸುರೇಶ್, ಎ.ಪಿಳ್ಳಪ್ಪ, ಹೇಮಂತ್‌ಕುಮಾರ್, ಶಿವಕುಮಾರ್ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement