ಬಸ್ ಕಿಟಕಿಯಿಂದ ಮದ್ಯ ಚೆಲ್ಲಿ ವ್ಯಕ್ತಿ ಪರಾರಿ
ಮಾಗಡಿ: ಪಟ್ಟಣದ ಬಸ್ಸಿನಲ್ಲಿ ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ಸುಮರು 41 ಬಾಟಲ್ ಮದ್ಯವನ್ನು ಚುನಾವಣಾ ಜಾಗೃತ ದಳ ಚಕ್ ಪೋಸ್ಟ್ಗಳಲ್ಲಿ ಪರಿಶೀಲಿಸುತ್ತಿದ್ದಂತೆ ಬಸ್ ಕಿಟಿಕಿಯಿಂದ ಹೊರ ಹಾಕಿ ವ್ಯಕ್ತಿ ಪರಾರಿಯಾಗಿದ್ದಾರೆ. ಈ ಸಂಬಂಧ ತಹಸೀಲ್ದಾರ್ ಡಾ.ಬಿ.ಆರ್. ಹರೀಶ್ ನಾಯಕ್ ಮದ್ಯವನ್ನು ವಶಪಡಿಸಿಕೊಂಡು ಅಗತ್ಯ ಕ್ರಮ ಕೈಗೊಂಡಿದ್ದಾರೆ.
2 ವಾಹನ ಜಪ್ತಿ
ಮಾಗಡಿ: ಕುದೂರಿನಲ್ಲಿ ಪಕ್ಷೇತರ ಅಭ್ಯರ್ಥಿಯ ವಾಹನವೊಂದು, ಕೆಜೆಪಿ ಅಭ್ಯರ್ಥಿ ಪರ ರೋಡ್ ಶೋನಲ್ಲಿ ಭಾಗವಹಿಸಿದ್ದ ಹಾಗೂ ಅನುಮತಿಯಿಲ್ಲದ ಮತ್ತೊಂದು ವಾಹನ ಸೇರಿ ಒಟ್ಟು 2 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ವಿಚಕ್ಷಣ ದಳದ ರವಿ ಎಸ್. ಸುರಾನ್ ತಿಳಿಸಿದರು.