ವಿಜೃಂಭಣೆಯ ರಾಮೋತ್ಸವ
ಕನಕಪುರ: ಕನಕಪುರ ತಾಲೂಕಿನ ಹೊಸದುರ್ಗ ಗ್ರಾಮದಲ್ಲಿ ಗುರುವಾರ ಶ್ರೀರಾಮ ರಥೋತ್ಸವ ವಿಜ್ರಂಭಣೆಯಿಂದ ನೇರವೇರಿತು. ಸಾವಿರಾರೂ ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಶುಕ್ರವಾರ ಸಂಜೆ ಸಮಯದಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಇಂದು ದೇವೇಗೌಡರರೋಡ್ ಶೋ
ಕನಕಪುರ: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು ಚುನಾವಣಾ ಪ್ರಚಾರಕ್ಕಾಗಿ ಏಪ್ರಿಲ್ 26ರಂದು ಕನಕಪುರಕ್ಕೆ ಆಗಮಿಸಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ.
ಕಾಂಗ್ರೆಸ್ನಿಂದ ಬ್ರಹ್ಮಾಂಡ ಭ್ರಷ್ಟಾಚಾರ
ದೊಡ್ಡಬಳ್ಳಾಪುರ: ಕಾಂಗ್ರೆಸ್ ಭೂಮಂಡಲದ ಯಾವ ಭಾಗವನ್ನೂ ಬಿಡದೆ ಭ್ರಷ್ಟಾಚಾರ ಎಸಗಿದೆ. ಹೆಲಿಕಾಪ್ಟರ್, ಕಲ್ಲಿದ್ದಲು, 2ಜಿ ತರಂಗ, ಕಾಮನ್ವೆಲ್ತ್ ಸೇರಿದಂತೆ ಸಾಲು ಸಾಲು ಹಗರಣಗಳ ಸರದಾರರು ಯುಪಿಎ ಸರ್ಕಾರದಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದರು. ದೊಡ್ಡಬಳ್ಳಾಪುರದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಪರ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರದ ದಕ್ಷಿಣದ ರಾಜ್ಯಗಳಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು ಗಣನೀಯ ಅಭಿವೃದ್ಧಿ ಯೋಜನೆಗಳನ್ನು ನೀಡಿದೆ. ಶೆಟ್ಟರ್ ಉತ್ತಮ ಬಜೆಟ್ ಮಂಡಿಸಿ ಗಮನ ಸೆಳೆದಿದ್ದಾರೆ. ಸರ್ಕಾರದಲ್ಲಿ ಉಂಟಾದ ಗೊಂದಲಗಳ ಹೊರತಾಗಿ ಅಭಿವೃದ್ಧಿಯಲ್ಲಿ ಯಾವುದೇ ಹಿನ್ನಡೆಯಾಗಿಲ್ಲ. ಯಡಿಯೂರಪ್ಪ ಪಕ್ಷದಿಂದ ಬೆಳೆದವರು. ಭ್ರಷ್ಟಾಚಾರದ ಆರೋಪ ಬಂದ ಹಿನ್ನಲೆಯಲ್ಲಿ ಅವರ ರಾಜಿನಾಮೆ ಪಡೆದದ್ದು ಪಕ್ಷದ ಸಿದ್ಧಾಂತಕ್ಕೆ ಪೂರಕವಾಗಿ. ವ್ಯಕ್ತಿಗಿಂತ ಪಕ್ಷ ಮುಖ್ಯ. ಅವರು ಆರೋಪಮುಕ್ತರಾಗಿದ್ದರೆ ಇಂದು ಉನ್ನತ ಸ್ಥಾನದಲ್ಲೇ ಇರುತ್ತಿದ್ದರು. ಸ್ವಯಂಕೃತ ಅಪರಾಧಕ್ಕೆ ಅವರು ಬೆಲೆತೆತ್ತರೇ ವಿನಃ ಪಕ್ಷ ಅವರಿಗೆ ಅನ್ಯಾಯ ಮಾಡಿಲ್ಲ ಎಂದರು.
ಕ್ಷುಲ್ಲಕ ಜಗಳ: ಕೊಲೆಯಲ್ಲಿ ಅಂತ್ಯ
ನೆಲಮಂಗಲ: ಅಣ್ಣ ತಮ್ಮನ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬುಧವಾರ ರಾತ್ರಿ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಹ್ಯಾರೋಕ್ಯಾತನಹಳ್ಳಿಯಲ್ಲಿ ನಡೆದಿದೆ. ಕೊಲೆಯಾದವನನ್ನು ಹೇಮಂತ್ಕುಮಾರ್ (22) ಎಂದು ಗುರುತಿಸಲಾಗಿದೆ. ಆರೋಪಿ ಉಮಾಶಂಕರ್ (25) ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಬ್ ಇನ್ಸ್ಪೆಕ್ಟರ್ ಐಯಣ್ಣರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.