ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಟೀಕೆಗೆ ಸೊಪ್ಪಾಕೋಲ್ಲ; ಗೌಡ

Vishwanath S
Updated On : 26 Apr 2013, 10:17 am

ಕ.ಪ್ರ.ವಾರ್ತೆ  ,  ರಾಮನಗರ  ,  ಏ.26
ನನ್ನ ಮೇಲೆ ಪ್ರಧಾನಿಯಾಗಿದ್ದಾಗಲೂ ಸಾಕಷ್ಟು ಟೀಕೆ, ಆರೋಪಗಳು ಕೇಳಿ ಬಂದಿದ್ದವು. ರಾಜಕಾರಣದಲ್ಲಿ ಅದ್ಯಾವುದಕ್ಕೂ ನಾನು ಸೊಪ್ಪು ಹಾಕುವುದಿಲ್ಲ, ಯಾರಿಗೂ ಅಂಜುವುದಿಲ್ಲ. ದೇವರು, ಜನತೆಗೆ ಮಾತ್ರವೇ ಹೆದರುವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ, ಮರಳವಾಡಿ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ರೋಡ್ ಶೋ ಮೂಲಕ ಜೆಡಿಎಸ್ ಅಭ್ಯರ್ಥಿಗಳ ಪರ ಮತ ಯಾಚಿಸಿ ಮಾತನಾಡಿದ ಅವರು, ರೈತ ಮತ್ತು ಜನಪರ ಆಡಳಿತಕ್ಕಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂದರು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತ ಕಾಯುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿದ್ದು, ರಾಜ್ಯದ ಹಿತಕ್ಕಾಗಿ ಜೆಡಿಎಸ್ ಸರ್ಕಾರ ರಚನೆ ಅಗತ್ಯವಾಗಿದೆ. ಬಿಜೆಪಿ, ಕಾಂಗ್ರೆಸ್ ದುರಾಡಳಿತದಿಂದ ಜನತೆ ರೋಸಿ ಹೋಗಿದ್ದಾರೆ. ಪ್ರಧಾನಿಯಾಗಿ ನಾನು ಮತ್ತು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ನೀಡಿರುವ ಆಡಳಿತ, ಈ ಬಾರಿ ಜೆಡಿಎಸ್ ನೀಡಿರುವ ಪ್ರಣಾಳಿಕೆಯು ಜನಮನ ಗೆದ್ದಿದೆ ಎಂದು ಎಂದು ದೇವೇಗೌಡ ಹೇಳಿದರು. ರಾಮನಗರ ಜಿಲ್ಲೆ ನಮ್ಮ ಕುಟುಂಬವನ್ನು ಮೊದಲಿಂದಲೂ ಬೆಂಬಲಿಸಿಕೊಂಡೇ ಬಂದಿದೆ. ಈ ಬಾರಿಯೂ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲವು ತಂದುಕೊಟ್ಟು, ಕುಮಾರಸ್ವಾಮಿ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.
ಕನಕಪುರದಲ್ಲೂ ಪ್ರಚಾರ: ದೇವೇಗೌಡ ಅವರು ಕನಕಪುರ ಟೌನ್, ಕೋಡಿಹಳ್ಳಿ, ಸಾತನೂರು ಹೋಬಳಿಗಳಲ್ಲಿ ಆ ಕ್ಷೇತ್ರದ ಅಭ್ಯರ್ಥಿ ಪಿ.ಜಿ.ಆರ್. ಸಿಂಧ್ಯಾ ಪರ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು. ಪ್ರಚಾರದಲ್ಲಿ ಸಿಂಧ್ಯಾ, ನಾರಾಯಣಗೌಡ, ಡಿ.ಎಂ.ವಿಶ್ವನಾಥ್, ಮರಿಲಿಂಗೇಗೌಡ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement