ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ

Vishwanath S
Updated On : 26 Apr 2013, 11:42 am

ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ, ಏ.24
ನಗರಾದ್ಯಂತ ವರನಟ ಡಾ.ರಾಜ್‌ಕುಮಾರ್ ಅವರ 85ನೇ ಜನ್ಮದಿನಾಚರಣೆ ಕಾರ್ಯಕ್ರಮ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಡಾ.ರಾಜ್ ಜನ್ಮದಿನವನ್ನು ಸರ್ಕಾರ ರಜಾ ದಿನವಾಗಿ ಘೋಷಣೆ ಮಾಡಿ, ಸರ್ಕಾರದ ನೇತೃತ್ವದಲ್ಲಿ ಈ ಮಹಾನ್ ಕಲಾವಿದನ ಜಯಂತ್ಯುತ್ಸವ ಆಚರಿಸಬೇಕು ಎಂಬ ಒತ್ತಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಡಾ.ರಾಜ್ ಅಭಿಜಾತ ಕಲಾವಿದ. ತನ್ನ ಅಭಿನಯದ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಿದ ಅವರು ಸುಸಂಸ್ಕೃತ ಸಮಾಜ ನಿರ್ಮಾಣದ ಸಂದೇಶ ನೀಡಿದರು. ಯುವಜನತೆಗೆ ಅವರು ಹಾಕಿಕೊಟ್ಟ ಮಾರ್ಗದರ್ಶನ ಅನನ್ಯವಾದದ್ದು ಎಂದರು.
ಕನ್ನಡ ಸಾಂಸ್ಕೃತಿಕ ಲೋಕ, ಚಳವಳಿ ಮತ್ತು ಹೋರಾಟಗಳ ಜೀವಂತಿಕೆಯಲ್ಲಿ ಅವರ ಅಚ್ಚಳಿಯದ ನೆನಪು ಇಂದಿಗೂ ಉಳಿದಿದೆ ಎಂದರು.
ರೋಗಿಗಳಿಗೆ ಹಣ್ಣು ವಿತರಣೆ: ಡಾ.ರಾಜ್ ಜನ್ಮದಿನಾಚರಣೆ ಅಂಗವಾಗಿ ತಾಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು.
ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ.ನ.ಪ್ರಭುದೇವ್, ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಹ.ರಾಮಕೃಷ್ಣ, ಕಾರ್ಯದರ್ಶಿ ಸು.ನರಸಿಂಹಮೂರ್ತಿ, ಉಪಾಧ್ಯಕ್ಷ ಪ್ರಕಾಶ್, ನಗರಾಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ರಾಜು, ಕೆ.ಕೆ.ವೆಂಕಟೇಶ್, ಕನ್ನಡಪಕ್ಷದ ಅಧ್ಯಕ್ಷ ಸಂಜೀವನಾಯಕ್, ಮಾಜಿ ನಗರಸಭಾ ಸದಸ್ಯೆ ಪ್ರಮೀಳಾ ಮಹದೇವ್, ಕಸಾಪ ತಾ.ಅಧ್ಯಕ್ಷ ಕೆ.ಆರ್.ರವಿಕಿರಣ್, ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿಯ ಅಧ್ಯಕ್ಷ ಜೆ.ಆರ್.ರಮೇಶ್, ತಾ.ಪುನೀತ್‌ರಾಜ್‌ಕುಮಾರ್ ಕನ್ನಡ ಸೇನಾ ಸಮಿತಿಯ ಅಧ್ಯಕ್ಷ ಎ.ಮಂಜುನಾಥ್, ತಾಲೂಕು ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ, ತಾಲೂಕು ಪುನೀತ್‌ರಾಜ್‌ಕುಮಾರ್ ಕನ್ನಡ ಯುವಕ ಸಂಘ, ನವಜಾಗೃತಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ರಾಶಿರಾಪು ಅಭಿಮಾನಿಗಳ ಸಂಘ, ಕನ್ನಡ ಯುವಶಕ್ತಿ ಬಳಗ ಸೇರಿದಂತೆ ಹಲವಾರು ಸಂಘಟನೆಗಳ ಪದಾಧಿಕಾರಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು. ನಂತರ ಇಲ್ಲಿನ ಸಿದ್ಧಲಿಂಗಯ್ಯ ವೃತ್ತದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement