ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಧರ್ಮಸ್ಥಳದಲ್ಲಿ ಪ್ರಮಾಣ ಮಾಡ ಬನ್ನಿ ಶಾಸಕರೆ'

Vishwanath S
Updated On : 26 Apr 2013, 11:43 am

ಕನಕಪುರ: ತಾಪಂ ಸದಸ್ಯ ಕಬ್ಬಾಳೇಗೌಡ ಶಾಸಕ ಡಿ.ಕೆ.ಶಿವಕುಮಾರ್ ತಮ್ಮ ವಿರುದ್ಧ ಸಾರ್ವಜನಿಕ ಸಭೆಗಳಲ್ಲಿ ಮಾಡಿರುವ ಆರೋಪ ಶುದ್ಧ ಸುಳ್ಳಾಗಿದ್ದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಕುಟುಂಬಸಮೇತರಾಗಿ ಸಿದ್ಧರಿದ್ದೇವೆ. ಶಾಸಕರು ಹೇಳಿದ್ದು ಸತ್ಯವೇ ಆದಲ್ಲಿ ತಮ್ಮ ಸವಾಲು ಸ್ವೀಕರಿಸಿ ದಿನಾಂಕ ನಿಗದಿ ಮಾಡಬೇಕೆಂದು ಸವಾಲು ಹಾಕಿದ್ದಾರೆ. ಇತ್ತೀಚೆಗೆ ಕಬ್ಬಾಳು ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರು ತಾಪಂ ಸದಸ್ಯ ಕಬ್ಬಾಳೇಗೌಡ ಆರು ಲಕ್ಷ ಸ್ವೀಕರಿಸಿ ಕಾಂಗ್ರೆಸ್ ಪರವಾಗಿ ಕಾರ್ಯನಿರ್ವಹಿಸುವುದಾಗಿ ಆರೋಪಿಸಿದ್ದರು. ಶಾಸಕರ ಆರೋಪ ಸಂಪೂರ್ಣ ಸುಳ್ಳು ಎಂದು ಕಬ್ಬಾಳೇಗೌಡ ಸ್ಪಷ್ಟೀಕರಣ ನೀಡಿ, ಕನಕಪುರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ಗೊಂದಲ ಮೂಡಿಸಲು ಶಾಸಕರು ನಡೆಸಿರುವ ಷಡ್ಯಂತ್ರವಾಗಿದ್ದು ಅವರ ಸುಳ್ಳು ಮಾತುಗಳನ್ನು ನಂಬಬಾರದು ಎಂದಿದ್ದಾರೆ. ಜೆಡಿಎಸ್ ಮುಖಂಡರಾದ ಚಂದ್ರಶೇಖರ್, ಭೂಹಳ್ಳಿ ಉಮೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement