ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾಳೆ ರೇಣುಕಾಚಾರ್ಯ ಯುಗಮಾನೋತ್ಸವ

Vishwanath S
Updated On : 27 Apr 2013, 2:02 am

ನೆಲಮಂಗಲ: ತಾಲೂಕಿನ ಶಿವಗಂಗೆಯ ಮೇಲಣಗವಿ ಮಠದಲ್ಲಿ ಏ.28ರಂದು  ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಹಾಗೂ ಧರ್ಮ ಚಿಂತನಾ ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಧರ್ಮ ಚಿಂತನಾ ಸಮಾರಂಭದಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮೇಲಣಗವಿ ಮಠದ ಪಟ್ಟದ ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಭೆಯ ನೇತೃತ್ವ ವಹಿಸಲಿದ್ದಾರೆ.ಬೆಂಗಳೂರು ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಶಿವಗಂಗೆಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತವನ್ನು ನೀಡಲಿದ್ದಾರೆ. ಕಂಚುಗಲ್ ಮಠದ ಬಸವಲಿಂಗ ಸ್ವಾಮೀಜಿ, ಏಕದಳ ಬಿಲ್ವ ಬಂಡೆ ಮಠದ ಸಚ್ಚಿದಾನಂದ ಸ್ವಾಮೀಜಿ, ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.
ಪ್ರಶಸ್ತಿ ಪ್ರದಾನ: ಖ್ಯಾತ ನೀರಾವರಿ ತಜ್ಞ ತುಮಕೂರು ಜೆ.ಎಸ್.ಪರಮಶಿವಯ್ಯ ಅವರು ಶಿವಗಂಗಾ ಶ್ರೀ ಪ್ರಶಸ್ತಿ ಪಡೆಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಹುಲಿಕಲ್ ನಟರಾಜು,
 ಬೆಂಗಳೂರು ಗ್ರಾಮಾಂತರ ಉಪನಿರ್ದೇಶಕ  ಎಚ್.ವಿ. ವೆಂಕಟೇಶ್, ಪೊಲೀಸ್ ಅಧಿಕ್ಷಕ ಆರ್. ಮಲ್ಲೇಶ್, ಲೋಕೋಪಯಾಗಿ ಅಧಿಕಾರಿ ವಿರೂಪಾಕ್ಷಯ್ಯ, ಬಿ.ಇ.ಒ ಹನುಮಾನಾಯಕ್ ಭಾಗವಹಿಸಲಿದ್ದಾರೆ.
ವಿಶೇಶ ಆಹ್ವಾನಿತರಾಗಿ ನೆಲಮಂಗಲ  ವೃತ್ತ ನಿರೀಕ್ಷಕ ಪ್ರಕಾಶ, ಪಿಎಸ್‌ಪಿ ನವೀನ್‌ಕುಮಾರ್  ಭಾಗವಹಿಸಲಿದ್ದಾರೆ. ಉತ್ಸವ: 28ರ ಸಂಜೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಶ್ರೀ ವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಶಿವಗಂಗೆಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ  ಮಂಗಲಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳ ನಡೆಯಲಿದೆ. ಇದೇ ಸಂದಭಂದಲ್ಲಿ ಕಂಬಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಆನಂದ ದೇಶೀಕೇಂದ್ರ ಸ್ವಾಮೀಜಿ, ದೊಡ್ಡಬೆಲೆ ಮಠದ ರುದ್ರಮುನಿ ಸ್ವಾಮೀಜಿ ಗಳಿಂದ ಧರ್ಮಧ್ವಜಾರೋಹಣ ನಡೆಯಲಿದೆ.
ಸಾವಿರಾರು ಮಂದಿ ಭಕ್ತರು ಸಮಾರಂಭಕ್ಕೆ ಆಗಮಿಸಲಿದ್ದು, ಚುನಾವಣೆಯ ನೀತಿ  ಸಂಹಿತೆ ಹಿನ್ನೆಲೆಯಲಿ ಈ ಬಾರಿಯ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಿಲ್ಲ ಎಂದು ಮೇಲಣಗವಿ ಮಠದ ಮಲಯಶಾಂತ ಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement