ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಪ್ರತಿ ಸೀಸೆ ಮದ್ಯಕ್ಕೂ ಬಿಲ್ ನೀಡಿ'

Vishwanath S
Updated On : 26 Apr 2013, 11:44 am

'ಪ್ರತಿ ಸೀಸೆ ಮದ್ಯಕ್ಕೂ ಬಿಲ್ ನೀಡಿ'
ಕ.ಪ್ರ.ವಾರ್ತೆ  ರಾಮನಗರ  ಏ.25
ಮದ್ಯದಂಗಡಿಗಳಲ್ಲಿ ಮಾರಾಟವಾಗುವ ಪ್ರತಿ ಸೀಸೆ ಮದ್ಯಕ್ಕೂ ಬಿಲ್ ನೀಡುವ ಮೂಲಕ ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕನಕಪುರ ಚುನಾವಣಾ ವೀಕ್ಷಕರಾಗಿರುವ ಕಮಲ್ ಚಕ್ರವರ್ತಿ ಅವರು ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನಕಪುರದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ನಿತ್ಯ ಅಬಕಾರಿ ಇಲಾಖೆಯ ಒಬ್ಬ ಅಧಿಕಾರಿ ಪ್ರತಿ ಮದ್ಯದಂಗಡಿಗೆ ಭೇಟಿ ನೀಡಿ ಬಿಲ್ ಪುಸ್ತಕ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮದ್ಯದ ಸೀಸೆ ಮೇಲೆ ಚಿಲ್ಲರೆ ಮಾರಾಟ ದರ ನಮೂದಿಸದೆ ಇದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು.

ಇಂದು ಬಿಎಸ್‌ವೈ ಭೇಟಿ
ಹುಳಿಯಾರು: ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕೆಜೆಪಿ ಪಕ್ಷ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರ ಚುನಾವಣಾ ಪ್ರಚಾರಕ್ಕಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಏ.27 ರಂದು  ಮಧ್ಯಾಹ್ನ ಆಗಮಿಸಲಿದ್ದು, ಪಟ್ಟಣದ ಎಪಿಎಂಪಿ  ಸಮೀಪ ಆಯೋಜಿಸಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸುವರು.

ಪರಿಸರ ರಕ್ಷಣೆ ಜಾಗೃತಿ ಜಾಥಾ
ಆನೇಕಲ್: ಆನೇಕಲ್ ಸಮೀಪದ ಅಲಯನ್ಸ್ ವಿವಿಯ ಕಾನೂನು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿಶ್ವ ಭೂ ದಿನದ ಅಂಗವಾಗಿ ಜಾಗೃತಿ ಜಾಥಾ ನಡೆಸಿದರು. ಕಾಲೇಜು ಕ್ಯಾಂಪಸ್‌ನಿಂದ ಪಟ್ಟಣದವರಿಗೆ 2 ಕೀ ಮೀಟರ್ ಕಾಲ್ನಡಿಗೆ ಜಾಥಾದಲ್ಲಿ ತೆರಳಿದ ವಿದ್ಯಾರ್ಥಿಗಳು  ನಾಮಫಲಕಗಳನ್ನು ಹಿಡಿದು ಜಾಗೃತಿ ಸಂದೇಶ ನೀಡಿದರು.  ಇರುವುದೊಂದೇ ಭೂಮಿ, ಅದನ್ನು ಉಳಿಸಿ. ಕಾಡನ್ನು ರಕ್ಷಿಸಿ, ಗುಬ್ಬಚ್ಚಿಗಳನ್ನು ಉಳಿಸಿ ಎಂಬ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಬಟ್ಟೆ ಅಂಗಡಿಗೆ ಬೆಂಕಿ
ಆನೇಕಲ್: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಮುನಿಸಿಪಲ್ ಕಾಂಪ್ಲೆಕ್ಸ್‌ನ ರವಿ ಫ್ಯಾಷನ್ ಬಟ್ಟೆ ಅಂಗಡಿಗೆ ಬೆಂಕಿ ತಗಲಿ ಎಲ್ಲಾ ಸರಕುಗಳು ಸುಟ್ಟು ಕರಕಲಾಗಿದೆ. ಗುರುವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಆನೇಕಲ್ ಪೊಲೀಸ್ ಸಿಬ್ಬಂದಿ ಅಗ್ನಿ ಶಾಮಕ ದಳವನ್ನು ಕರೆಸಿ ಬೆಂಕಿಯನ್ನು ನಂದಿಸಿದ್ದಾರೆ. ಮಾಲಿಕ ರವಿ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement