ರು. 50 ಸಾವಿರ ಮೌಲ್ಯದ ಅಕ್ರಮ ಮದ್ಯ ವಶ
ನೆಲಮಂಗಲ: ತಾಲೂಕಿನ ಹಂಚೀಪುರ ಗ್ರಾಮದ ಬಳಿಯ ಚಾಮುಂಡೇಶ್ವರಿ ಡಾಭಾದ ಹಿಂಭಾಗದ ಜಮೀನಿನಲ್ಲಿ ನೀರಿನ ಟ್ಯಾಂಕರ್ನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 50 ಸಾವಿರ ರುಪಾಯಿ ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಪೊಲೀಸ್ ಉಪ ಅಧೀಕ್ಷಕಿ ನಿರ್ಮಲಾ ನೇತೃತ್ವದಲ್ಲಿ ದಾಳಿ ನಡೆಸಿ ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ. ನೀರಿನ ಟ್ಯಾಂಕರ್ ಟ್ರ್ಯಾಕ್ಟರ್ ಮೂಲಕ ಮದ್ಯ ತಂದು ಜಮೀನಿನಲ್ಲಿ ಟ್ಯಾಂಕರ್ ಬಿಟ್ಟು ಇಂಜಿನ್ ಬೇರೆಡೆ ನಿಲ್ಲಿಸಿದ್ದರು. ಜಮೀನಿನ ಮಾಲೀಕ ಹಾಗೂ ಟ್ರಾಕ್ಟರ್ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಚುನಾವಣೆಗಾಗಿ ಮತದಾರರಿಗೆ ಹಂಚಲು ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಕ್ಷೇತ್ರ ಚುನಾವಣಾಧಿಕಾರಿ ಅಮರೇಶ್, ಗ್ರಾಮಾಂತರ ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ಗೌರಿ, ಅಬಕಾರಿ ಡಿ.ವೈ.ಎಸ್ಪಿ ಪದ್ಮ, ಅಬಕಾರಿ ಇನ್ಸ್ಪೆಕ್ಟರ್ ಚಂದ್ರಣ್ಣ ಸೇರಿದಂತೆ ಸಿಬ್ಬಂದಿ ಮತ್ತಿತರರು ಇದ್ದರು.