ಸಮಾಜಮುಖಿ ವ್ಯಕ್ತಿಯನ್ನು ಆಯ್ಕೆ ಮಾಡಿ: ಭಾಸ್ಕರ್
ನೆಲಮಂಗಲ: ಕ್ಷೇತ್ರದಲ್ಲಿ ಸಮಾಜಮುಖಿ ವ್ಯಕ್ತಿ ಮತ್ತು ಪಕ್ಷದ ಹಿನ್ನೆಲೆ ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್. ಭಾಸ್ಕರ್ ಪ್ರಸಾದ್ ಅಭಿಪ್ರಾಯಪಟ್ಟರು.
ಅವರು ಬುಧವಾರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ದಲಿತ ಸಮುದಾಯದ ರಾಜಕೀಯ ಮುಂದಿನ ನಡೆ ಕುರಿತಾದ ಚರ್ಚೆಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಬಾರಿ ಉತ್ತಮ ಫಲಿತಾಂಶಕ್ಕೆ ನಾವೆಲ್ಲರೂ ಒಮ್ಮತದ ಅಭ್ಯರ್ಥಿಯನ್ನು ಚುನಾವಣೆಗೆ ಮುನ್ನವೇ ಆಯ್ಕೆ ಮಾಡಿಕೊಂಡು ಅವರ ಗೆಲವಿಗೆ ಕಾರಣರಾಗಬೇಕು ಎಂಬ ದೃಷ್ಟಿಯಿಂದ ಸಭೆ ಸೇರಿ ಸರ್ವಾನುಮತದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜನಮೂರ್ತಿ ಅವರನ್ನು ಬೆಂಬಲಿಸಿ ಮತ ನೀಡುವುದಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ರಾಜ್ಯ ಸಂಚಾಲಕ ಪಿ.ನಾರಾಯಣಸ್ವಾಮಿ, ತ್ಯಾಮಗೊಂಡ್ಲು ಶಂಕರಪ್ಪ, ರವಿಚಂದ್ರ ಗಂಗಬೇಲಪ್ಪ, ಕೆ.ವಿ.ಮಂಜುನಾಥ್, ಪಾಪಯ್ಯ,ಎನ್.ಕೆ.ರಾಜು ಮತ್ತು ನಾಗರಾಜು ಇದ್ದರು.