ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕರಾವಳಿ ನಾಯಕರ ಕಿತ್ತಾಟ: ಮೊಯ್ಲಿ, ಸದಾನಂದಗೌಡ ಪರಸ್ಪರ ವಾಗ್ದಾಳಿ

Vishwanath S
Updated On : 28 Apr 2013, 12:50 pm

ದೊಡ್ಡಬಳ್ಳಾಪುರ: ಬಯಲುಸೀಮೆಯ ದೊಡ್ಡಬಳ್ಳಾಪುರದಲ್ಲಿ ಕರಾವಳಿ ಖದರ್ ಈ ಬಾರಿ ಜೋರಾಗಿದೆ. ಸಂಸದ ವೀರಪ್ಪಮೊಯ್ಲಿ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದು, ಬಿಜೆಪಿ ಹಾಗೂ ಸದಾನಂದ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮತ್ತೊಂದೆಡೆ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಬ್ಯುಜಿಯಾಗಿರುವ ಮಾಜಿ ಸಿಎಂ, ಕರಾವಳಿಯ ಪ್ರಭಾವಿ ಮುಖಂಡ ಡಿ.ವಿ. ಸದಾನಂದಗೌಡ ಮೊಯ್ಲಿ ವಿರುದ್ಧವು ಆರೋಪಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಇಬ್ಬರೂ ಮುಖಂಡರು ತಮ್ಮ ಪಕ್ಷಗಳ ಪರ ಚುನಾವಣಾ ಪ್ರಚಾರದಲ್ಲಿ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಆರೋಪ-ಪ್ರತ್ಯಾರೋಪ: ಇಲ್ಲಿನ ಪ್ರಚಾರ ಸಭೆಯೊಂದರಲ್ಲಿ ವೀರಪ್ಪಮೊಯ್ಲಿ ಮಾತನಾಡುತ್ತಾ, ಸದಾನಂದಗೌಡರು ಮಾತಿನಮಲ್ಲ, ಮುಖ್ಯಮಂತ್ರಿಯಾಗಿದ್ದರೂ ಅದರ ನೈಜ ಅಧಿಕಾರ ಪ್ರಯೋಗಿಸದ ದುರ್ಬಲ ವ್ಯಕ್ತಿ ಎಂದು ಜರಿದಿದ್ದರು. ಜತೆಗೆ ಬಿಜೆಪಿ ಸರ್ಕಾರದ ವೈಫಲ್ಯಗಳು ಮತ್ತು ಹಗರಣಗಳ ಬಗ್ಗೆ ವಿಸ್ತೃತ ಟೀಕೆ ಮಾಡಿದ್ದರು. ಪ್ರತಿಯಾಗಿ ಸದಾನಂದಗೌಡ, ವೀರಪ್ಪಮೊಯ್ಲಿ ಸುಳ್ಳಿನ ಸರದಾರ. ಸುಳ್ಳು ಹೇಳಿಕೊಂಡೇ ಕರಾವಳಿ ಜನರನ್ನು ವಂಚಿಸಿದ ಮೇಲೆ ಅಲ್ಲಿನ ಜನ ಅವರನ್ನು ತಿರಸ್ಕರಿಸಿದರು. ಆದರೆ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರದ ಜನ ಅವರಿಗೆ ಮತ್ತೆ ಮರುಜೀವ ಕೊಟ್ಟರು. ಈ ಕೃತಜ್ಞತೆ ಹೊಂದಿರದ ಅವರು ಸುಳ್ಳಿನಿಂದಲೇ ಮೆಚ್ಚಿಸುವ ಕೆಲಸ ಮಾಡಿ, ವಂಚಿಸುತ್ತಿದ್ದಾರೆ ಎಂದು ಟೀಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement