ಪ್ರಾದೇಶಿಕ ಪಕ್ಷಗಳು ಅಗತ್ಯ: ಮಧುಗೌಡ
ಕ.ಪ್ರ. ವಾರ್ತೆ, ಕನಕಪುರ,ಏಪ್ರಿಲ್ 23
ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿರುವಾಗ ಪ್ರಾದೇಶಿಕ ಪಕ್ಷಗಳು ಅಗತ್ಯ ಎಂದು ಭಾವಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕರ್ನಾಟಕ ಜನತಾಪಕ್ಷವನ್ನು ಸ್ಥಾಪಿಸಿ ಬೃಹತ್ ರಾಜಕೀಯ ಶಕ್ತಿಯಾಗಿ ಬೆಳೆದಿದ್ದಾರೆ. ಅವರ ನೇತೃತ್ವ ಮಾರ್ಗದರ್ಶನಗಳಿಂದಾಗಿ ರಾಜ್ಯದಲ್ಲಿ ಕೆಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಭ್ಯರ್ಥಿ ಎಂ.ಮಧುಗೌಡ ಹೇಳಿದ್ದಾರೆ.
ಅವರು ಸಂತೇಕೋಡಿಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದಾರೆ.
ತೆಂಗಿನಕಾಯಿ ಶುಭ ಫಲದ, ಯಶಸ್ಸಿನ ಸಂಕೇತವಾಗಿದ್ದು ಈ ಚಿಹ್ನೆಗೇ ಮತಚಲಾಯಿಸಬೇಕೆಂದು ಮನವಿ ಮಾಡಿದ ಮಧುಗೌಡ, ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ನಿಜಲಿಂಗಪ್ಪನವರ ಧ್ಯೇಯ ಆದರ್ಶಗಳು ಯುವಜನತೆಗೆ ಮಾದರಿಯಾಗಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಕನಕಪುರದ ಹಿತವನ್ನು ಸಾಧಿಸಲು ತಮ್ಮನ್ನು ಆಯ್ಕೆ ಮಾಡಬೇಕೆಂದು ವಿನಂತಿಸಿದರು. ತಾಲೂಕು ಯವಘಟಕದ ಅಧ್ಯಕ್ಷ ವೃಷಭೇಂದ್ರಮೂರ್ತಿ ಪಾಲ್ಗೊಂಡಿದ್ದರು.