'ಕೈ' ಸೇರಿದ ಜೆಡಿಎಸ್ ಕಾರ್ಯಕರ್ತರು
ರಾಮನಗರ: ತಾಲೂಕಿನ ಕೊಳ್ಳಿಗನಹಳ್ಳಿ ಮತ್ತು ಅಂಜನಾಪುರ ಗ್ರಾಮದ ವಿವಿಧ ಪಕ್ಷಗಳ ಕಾರ್ಯಕರ್ತರು ಅಭ್ಯರ್ಥಿ ಮರಿದೇವರು ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಹಾರೋಹಳ್ಳಿ ಹೋಬಳಿಯ ಕೊಳ್ಳಿಗನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು, ವಾಹನಗಳಲ್ಲಿ ಸಂಚರಿಸುವುದ ದುಸ್ಸಾಹಸವಾಗಿದೆ. ಬಸ್ ಸೌಕರ್ಯವೂ ಇಲ್ಲ. ಜೆಡಿಎಸ್ ಪ್ರಾಮಾಣಿಕ ಕಾರ್ಯಕರ್ತರಾಗಿದ್ದ ನಮ್ಮನ್ನು ಆ ಪಕ್ಷದ ಮುಖಂಡರು ಕಡೆಗಣಿಸಿದ್ದಾರೆ ಎಂದು ಜೆಡಿಎಸ್ ತೊರೆದವರು ದೂರಿದರು. ಕೆ.ರಾಜು ಶಾಸಕರಾಗಿ ಒಂದು ಬಾರಿಯೂ ನಮ್ಮ ಗ್ರಾಮಕ್ಕೆ ಭೇಟಿ ನೀಡಿಲ್ಲ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಂಡಿಲ್ಲ. ಮತ ಯಾಚನೆಗೆ ಬಂದ ಸಂದರ್ಭದಲ್ಲೂ ಭೇಟಿಯಾಗಿಲ್ಲ ಎಂದರು.