ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಡಿಎಸ್ ಮತಯಾಚನೆ

Vishwanath S
Updated On : 29 Apr 2013, 1:08 am

ವಿಜಯಪುರ: ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಚಂದ್ರಣ್ಣನವರು ಪಕ್ಷದ ವರಿಷ್ಠರ ಸಾಮಾಜಿಕ ಬದ್ಧತೆಗೆ ಬೆಲೆ ಕೊಡಬೇಕಿತ್ತು ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ತಿಳಿಸಿದರು.ಅವರು ಪಟ್ಟಣ ಸಮೀಪದ ಭಟ್ರೇನಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತಯಾಚನೆಗೆ ಹೊರಡುವ ಸಂದರ್ಭದಲ್ಲಿ ಮಾತನಾಡಿದರು.
ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಥಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ಪಿಳ್ಳಮುನಿಶ್ಯಾಮಪ್ಪ, ಜಿ.ಪಂ,ಮಾಜಿ ಸದಸ್ಯ ಬಸವರಾಜು,ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮುನೇಗೌಡ, ಜಿ.ಪಂ.ಸದಸ್ಯೆ ನಳಿನಾ ಮುನಿರಾಜು, ತಾ.ಜೆಡಿಎಸ್ ಅಧ್ಯಕ್ಷ ಬೂದಿಹಾಳ್ ಮುನಿಶಾಮ, ವಿಜಯಪುರ ಟೌನ್ ಅಧ್ಯಕ್ಷ ಎನ್.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

'ಸಾಮಾಜಿಕ ಕಳಕಳಿ ಇರಲಿ'
ಸೂಲಿಬೆಲೆ: ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಸಂಘಟನೆಗಳು ದೇಶದಲ್ಲಿರುವ ಹತ್ತಾರು ಸಮಸ್ಯೆಗಳ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೂ.ರಂ. ರಾಮಯ್ಯ ಹೇಳಿದ್ದಾರೆ.ಸೂಲಿಬೆಲೆ ಸಂತೆ ಮೈದಾನದಲ್ಲಿ  ಡಿವೈಐಎಫ್ ಸಂಘಟನೆ ಹಮ್ಮಿಕೊಂಡಿದ್ದ ಡಾ.ಬಿ.ಅರ್ ಅಂಬೇಡ್ಕರ್ ಜಯಂತಿ ಹಾಗೂ ಪವಾಡ ಬಯಲು ರಹಸ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸಂಘಟನೆಯ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ, ದೇಶದಲ್ಲಿ ಆನೇಕ ಸಮಸ್ಯೆಗಳು ತಾಂಡವಾಡುತ್ತಿವೆ. ಭ್ರಷ್ಟಚಾರವನ್ನು ತೊಲಗಿಸಲು ಯುವಕರು ಮುಂದಾಗಬೇಕು.ಸರ್ಕಾರಗಳ ಜನಪರ ಹಿತವನ್ನು ತೋರುತ್ತಿಲ್ಲ ಎಂದರು.ವಕೀಲ ಸಂಘದ ಅಧ್ಯಕ್ಷ ಹರೀಂದ್ರ ಮಾತನಾಡಿ, ದೇಶದಲ್ಲಿರುವ ಬಡತನ , ಮೂಡನಂಬಿಕೆಯನ್ನು ತೊಲಗಿಸಲು ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದರು.ಚಲನಚಿತ್ರ ನಟ ಚೇತನ್ ಮಾತನಾಡಿ, ಪ್ರಶ್ನೆ ಮಾಡುವ ಮನೋಭಾವ ಬೆಳಸಿಕೊಂಡರೆ ಸಮಸ್ಯೆಗಳು ಸುಧಾರಣಿಯಾಗಲು ಸಾಧ್ಯ ಎಂದರು.ಹೊಸಕೋಟೆ ತಾ.ಡಿವೈಐಎಫ್ ಅಧ್ಯಕ್ಷ ಶ್ರೀನಿವಾಸಚಾರಿ, ಕಾರ್ಯದರ್ಶಿ ಮೋಹನ್ ಬಾಬು ಮಾತನಾಡಿದರು.ಇದೇ ವೇಳೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಹಗ್ಗಜಗ್ಗಾಟ, ಕಬ್ಬಡಿ, ಸ್ಲೋಸೈಕಲ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಸೂಲಿಬೆಲೆ ಹೋಬಳಿಯ ಡಿವೈಐಎಫ್ ಸಂಘಟನೆಯ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.

'ಪ್ರಗತಿಯೇ ಕೆಜೆಪಿ ಮಂತ್ರ'
ನೆಲಮಂಗಲ:  ರಾಜ್ಯಕ್ಕಾಗಿರುವ ಅನ್ಯಾಯಕ್ಕೆ  ನ್ಯಾಯ ದೊರಕಿಸಿಕೊಡುವ ಗುರಿ ನಮ್ಮದಾಗಿದೆ ಎಂದು ಕೆ.ಜೆ.ಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.ಅವರು ಶನಿವಾರ ಪಟ್ಟಣದ ಐ.ಟಿ.ಐ ಕಾಲೇಜು ಆವರಣದಲ್ಲಿ ಕರ್ನಾಟಕ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್  ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ  ಕ್ಷೇತ್ರದ ಕೆ.ಜೆ.ಪಿ ಅಭ್ಯರ್ಥಿ ಹೆಚ್.ಪಿ.ಚಲುವರಾಜುಗೆ  ಮತ ನೀಡುವ ಮೂಲಕ ಗೆಲ್ಲಿಸಿ ಎಂದು ಮನವಿ ಮಾಡಿದರು.ಕೆ.ಜೆ.ಪಿಗೆ ಅಧಿಕಾರ ನೀಡಿದರೆ 2 ಲಕ್ಷ ಕೋಟಿ ಬಜೆಟ್ ನೀಡಿ ರೈತರಿಗೆ ದೀನದಲಿತರಿಗೆ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.ಬಿ.ಎಸ್.ಯಡಿಯೂರಪ್ಪ  ಎಲ್ಲಾ  ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು ಎಂದು ಕೆ.ಜೆ.ಪಿ ಅಭ್ಯರ್ಥಿ ಹೆಚ್.ಪಿ.ಚಲುವರಾಜು  ಹೇಳಿದರು.  ರಾಜ್ಯ ಕಾರ್ಯದರ್ಶಿ ಬಿ.ಎಸ್.ಪರಮಶಿವಯ್ಯ, ಜಿಲ್ಲಾಧ್ಯಕ್ಷ ಜೋ.ನಾ.ಮಲ್ಲಿಕಾರ್ಜುನ್, ಮುಖಂಡರಾದ ಉಮಾಶಂಕರ್, ತಾಲೂಕು ಅಧ್ಯಕ್ಷ ಬೆಟ್ಟಸ್ವಾಮಿಗೌಡ, ತೀರ್ಥೇಶ್, ಚಂದ್ರಣ್ಣ, ರಾಮಚಂದ್ರ, ಸೌಮ್ಯ  ಮತ್ತಿತರರು ಉಪಸ್ಥಿತರಿದ್ದರು.

ಸುರೇಶ್ ಪ್ರಚಾರ
ಕನಕಪುರ: ತಾಲೂಕು ತುಂಗಣಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಡಿ.ಕೆ.ಸುರೇಶ್, ಮಾಜಿ ವಿಪ ಸದಸ್ಯ ಎಸ್.ರವಿ, ರಾಯಸಂದ್ರ ರವಿ, ತುಂಗಣಿ ರಂಗಸ್ವಾಮಿ, ದುರ್ಗಯ್ಯ, ತಾಪಂ ಸದಸ್ಯ ಪುರುಷೋತ್ತಮ್, ಜಿಪಂ ಸದಸ್ಯ ವೆಂಕಟೇಶಯ್ಯ ಮೊದಲಾದವರು ಶಾಸಕ ಡಿ.ಕೆ.ಶಿವಕುಮಾರ್ ಪರವಾಗಿ ಮನೆಮನೆಗಳಿಗೆ ತೆರಳಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement