ಜೈಲು ಸೇರೋ ನಾಯಕರು ಬೇಕೋ, ಪ್ರಾಮಾಣಿಕರು ಬೇಕೋ...?
ಕ.ಪ್ರ.ವಾರ್ತ್ಣೆ ಮಾಗಡಿ , ಏ.28
ಜೈಲು ಸೇರೋ ನಾಯಕರು ಬೇಕೋ, ವಿಧಾನ ಸೌಧಕ್ಕೆ ಹೋಗುವ ನಾಯಕರು ಬೇಕೋ, ನೀವೇ ತೀರ್ಮಾನಿಸಿ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಮತದಾರರ ಆಯ್ಕೆಗೆ ಬಿಟ್ಟರು.
ಅವರು ಬಾಚೇನಹಟ್ಟಿ, ಬೆಳಗುಂಬ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಪರ ಮತಯಾಚನೆಯಲ್ಲಿ ರೋಡ್ ಶೋ ಮೂಲಕ ಮಾತನಾಡುತ್ತಾ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಅಪ್ಪ, ಮಕ್ಕಳ ಪಕ್ಷ, ಕಾರಣ. ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರ ತಪ್ಪಿನಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂತು ಎಂದರು.
ಬಿಜೆಪಿ ನಾಯಕರಿಗೆ ನಾಡಿನ ಜನತೆ ಅವಕಾಶ ಕೊಟ್ಟಿದ್ದರು. ಆದರೆ ಇವರ್ಯಾರು ಕುಳಿತುಕೊಳ್ಳಲು ಮನಸ್ಸು ಮಾಡಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿ ಪರಪ್ಪನ ಅಗ್ರಹಾರದ ಜೈಲು ಸೇರಿದರು ಎಂದರು.
ದಳದ ಕೃಷ್ಣಪ್ಪ, ಮುದ್ದಹನುಮೇಗೌಡ, ಜವರೇಗೌಡ ಸೇರಿದಂತೆ ಬಹುತೇಕ ನಾಯಕರು ಪಕ್ಷ ತೊರೆದ ಪರಿಣಾಮ ರಾಜ್ಯದಲ್ಲಿ ಜೆಡಿಎಸ್‌ಗೆ ಭಾರಿ ಹೊಡೆತ ಬಿದ್ದಿದೆ. ಎ.ಮಂಜು ದೀಮಂತ ಹೋರಾಟಗಾರ, ಹೇಮಾವತಿ ನೀರು ಕ್ಷೇತ್ರಕ್ಕೆ ಹರಿಸಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಅವರಿಗೆ ಮತ ನೀಡಿ ಆಶೀರ್ವದಿಸಿ ಎಂದು ಎಚ್.ಎಂ. ರೇವಣ್ಣ ಮತದಾರರಲ್ಲಿ ಮನವಿ ಮಾಡಿಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಮಾತನಾಡಿ 600 ಕೋಟಿ ಹಗರಣದ ಶಾಸಕ, ಮತದಾರರಿಗೆ ಅಗೌರವ ತೋರಿದ್ದಾರೆ, ಮೋಸ ಮಾಡಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಶಾಸಕ ಸ್ಥಾನಕ್ಕಲ್ಲ, ನಿಮ್ಮ ಸೇವಕನಾಗಿ ಸ್ಪರ್ಧಿಸಿದ್ದೇನೆ. ನಾನು ನಿಮ್ಮ ಮನೆಯ ಮಗ, ನನಗೆ ಮತ ನೀಡಿ ಗೆಲ್ಲಿಸುವಂತೆ ಅಭ್ಯರ್ಥಿ ಎ.ಮಂಜು ಮತಯಾಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ಬಿ.ವಿ. ಜಯರಾಮು, ಬಿ.ಎಸ್. ಕುಮಾರ್, ಬಿ.ಎಸ್. ಸುಹೇಲ್, ತೇಜಸ್ವಿನಿ ಮುದ್ದಹನುಮೇಗೌಡ, ನರಸಿಂಹಮೂರ್ತಿ, ಕುಮಾರ್, ರಾಮಣ್ಣ, ಚಂದ್ರಯ್ಯ, ಕಿಟ್ಟಿ,ದೊಡ್ಡಯ್ಯ ಇತರರು ಇದ್ದರು.