ಡಾಬಾದಲ್ಲಿದ್ದ ಅಕ್ರಮ ಮದ್ಯದ ಬಾಟಲ್ ಜಪ್ತಿ
ಮಾಗಡಿ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ರ ನಾರಸಂದ್ರ ಬಳಿ ಇರುವ ಶಾರ್ಕ್ ಡಾಬಾ ಮೇಲೆ ಚುನಾವಣಾ ವಿಚಕ್ಷಣ ದಳ ದಾಳಿ ನಡೆಸಿ ಡಾಬಾದಲ್ಲಿದ್ದ ಅಕ್ರಮವಾಗಿ ಇಟ್ಟುಕೊಂಡಿದ್ದ ಮದ್ಯದ ಬಾಟಲ್ಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿರುವುದಾಗಿ ತಹಸೀಲ್ದಾರ್ ಡಾ.ಹರೀಶ್ ನಾಯಕ್ ತಿಳಿಸಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿಯಿರುವುದರಿಂದ ಡಾಬಾಗಳಲ್ಲಿ ಮದ್ಯ ಸರಬರಾಜಿಗೆ ಅನುಮತಿ ಇಲ. ಆದರೂ ಸುಮಾರು 200ಕ್ಕೂ ಹೆಚ್ಚು ಮಂದಿ ಡಾಬಾದಲ್ಲಿ ಮದ್ಯ ಸೇವೆಯಲ್ಲಿ ತೊಡಗಿದ್ದರು. ಈ ಸಂಬಂಧಪಟ್ಟ ಡಾಬಾ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು, ಡಾಬಾ ತೆರೆಯದಂತೆ ಆದೇಶ ನೀಡಲಾಗಿದೆ ಎಂದರು. ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳಾದ ಕೆ.ಬಿ. ಅಕ್ಕೋಜಿ, ಬಾಬುನಾಯಕ್, ರವಿ ಎಸ್. ಸೂರನ್, ಕುದೂರು ಪಿಎಸ್ಐ ರವಿ ದಾಳಿ ನೇತೃತ್ವ ವಹಿಸಿದ್ದಾಗಿ ತಹಸೀಲ್ದಾರ್ ತಿಳಿಸಿದರು.