ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಎಸ್‌ಪಿ ಅಭ್ಯರ್ಥಿ ಮತಯಾಚನೆ

Vishwanath S
Updated On : 29 Apr 2013, 1:07 am

ಕನಕಪುರ: ಕನಕಪುರ ತಾಲೂಕಿನಾದ್ಯಂತ ಲೂಟಿಯಾಗುತ್ತಿರುವ ಗ್ರಾನೈಟ್, ಅರಣ್ಯಸಂಪತ್ತು, ಮರಳು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿ ಸಮಾನತೆ, ಸೋದರತೆ, ಸಹಬಾಳ್ವೆ ಮೂಡಿಸುವುದು ಅತ್ಯಗತ್ಯವಾಗಿದ್ದು ಬಹುಜನರ ಪಕ್ಷ ಬಿಎಸ್ಪಿಗೆ ಮತನೀಡಿ ಗೆಲ್ಲಿಸಬೇಕು ಎಂದು ಅಭ್ಯರ್ಥಿ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
 ಅವರು ದೊಡ್ಡಆಲಹಳ್ಳಿ ಗ್ರಾಮದಲ್ಲಿ ಮನೆಮನೆಗಳಿಗೆ ತೆರಳಿ ಪ್ರಚಾರ ನಡೆಸುತ್ತಾ ಮಾತನಾಡಿದರು. ಬಿಎಸ್ಪಿ ಮುಖಂಡರಾದ ಅಂದಾನಪ್ಪ, ನಾಗೇಶ್, ರಮೇಶ್‌ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಬಹುಜನ ಸಮಾಜವಾದಿ ಪಕ್ಷ ಕೇವಲ ದಲಿತ ಹಿಂದುಳಿದವರ ಪಕ್ಷವಲ್ಲ, ಮೇಲ್ವರ್ಗಗಳನ್ನೂ ಒಳಗೊಂಡಂತೆ ಎಲ್ಲರ ಅಭ್ಯುದಯವನ್ನು ಕೋರುವ ಆಶಿಸುವ ಪಕ್ಷವಾಗಿದೆ.  ಸರ್ವ ಸಮುದಾಯದಲ್ಲಿಯೂ ಸಮಾನತೆ ಮೂಡಿಸಲು, ಭೇದ ಭಾವ ತೊಡೆಯಲು ಬಿಎಸ್ಪಿ ಪಕ್ಷದಿಂದ ಮಾತ್ರಸಾಧ್ಯ ಎಂದು ಮಲ್ಲಿಕಾರ್ಜುನ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement