ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೇಲ್ನೋಟಕ್ಕೆ ಅತ್ಯಾಚಾರ ಸಾಬೀತು

Vishwanath S
Updated On : 29 Apr 2013, 12:06 pm

ಸೂಲಿಬೆಲೆ: ಇಲ್ಲಿಗೆ ಸಮೀಪದ  ನಂದಗುಡಿ ಹೋಬಳಿಯ ಗುಂಡ್ರಹಳ್ಳಿಯಲ್ಲಿ ಶನಿವಾರ ನಡೆದ ಯುವತಿ ಕೊಲೆ ಪ್ರಕರಣದಲ್ಲಿ ಕೊಲೆಗೂ ಮುನ್ನ ಅತ್ಯಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ 2-3 ಮಂದಿ ಭಾಗಿಯಾಗಿರುವುದು ಪತ್ತೆಯಾಗಿ, ಸುಳಿವು ಸಿಕ್ಕಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪಿಎಸ್‌ಐ ಪ್ರಕಾಶ್ ತಿಳಿಸಿದ್ದಾರೆ.
ಗುಂಡ್ರಹಳ್ಳಿ ಹಿಪ್ಪುನೇರಳೆ ತೋಟದಲ್ಲಿ ಕೊಲೆಯಾದ 19 ವರ್ಷದ ಗೌರಿ (ಹೆಸರು ಬದಲಾಯಿಸಲಾಗಿದೆ) ಯಲಹಂಕ ಮೂಲದ ಮಧು ಎಂಬಾತನನ್ನು ಪ್ರೀತಿಸಿದ್ದಳು. ಸಂತೋಷ ಎಂಬಾತ ಹರ್ಷಿತಳಿಗೆ ಸ್ನೇಹಿತನಾಗಿದ್ದ. ಈ ವಿಚಾರ ಮನೆಯಲ್ಲಿ ತಿಳಿದ ಮೇಲೆ ಇಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು. ಇವರೆಲ್ಲರ ಮೇಲೆ ಅನುಮಾನವಿದೆ ಎಂದು ಹರ್ಷಿತಳಾ  ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಪಿಎಸ್‌ಐ ಪ್ರಕಾಶ್ ತಿಳಿಸಿದ್ದಾರೆ. ಘಟನೆ ಸ್ಥಳಕ್ಕೆ ಎಸ್ಪಿ ಪ್ರಕಾಶ್, ಡಿವೈಎಸ್ಪಿ ಜೀನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement