ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ'

Rashmi Kasaragodu
Updated On : 30 Apr 2013, 11:33 am

ಕ.ಪ್ರ.ವಾರ್ತೆ   ಹೊಸಕೋಟೆ   ಏ.29-
 ತಾಲೂಕಿನಲ್ಲಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಕಾರ್ಯನಿರ್ವಹಿಸಿರುವುದೇ ತಮಗೆ ಶ್ರೀರಕ್ಷೆ ಎಂದು ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.
ಅವರು ತಾಲೂಕಿನ ಜಿನ್ನಾಗರ ಗ್ರಾಮದಲ್ಲಿ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು. ತಾಲೂಕಿನ  15,383 ಎಪಿಎಲ್, 45973 ಬಿಪಿಎಲ್, 3505 ಅಂತ್ಯೋದಯ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು 44.4 ಕೋಟಿ ರು.ವೆಚ್ಚದಲ್ಲಿ 599 ಕೊಳವೆ ಬಾವಿಗಳನ್ನು ಕೊರೆದು 215 ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದು 57 ಓವರ್ ಟ್ಯಾಂಕ್ ನಿರ್ಮಿಸಲಾಗಿದೆ. ರೇಷ್ಮೆ ಕೃಷಿ ಉತ್ತೇಜಿಸಲು 4008 ಫಲಾನುಭವಿಗಳಿಗೆ 5.80 ಕೋಟಿ ರು.ಗಳ ಸಹಾಯಧನ ನೀಡಲಾಗಿದೆ.
ಮುಖ್ಯಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿ 101 ಕಿ.ಮೀ.ಗಳ ಸಂಪರ್ಕ ರಸ್ತೆಗಳನ್ನು 47.70 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಎಲೆಮಲ್ಲಪ್ಪಶೆಟ್ಟಿ ಕೆರೆ ನೀರನ್ನು ದೊಡ್ಡಕೆರೆಗೆ ಸಂಪರ್ಕಿಸಲು 4 ಕೋಟಿ ರು., ದೇವಶೆಟ್ಟಿಹಳ್ಳಿ ಬಳಿ ಇಂಗುಕೆರೆ ನಿರ್ಮಾಣಕ್ಕೆ 71 ಲಕ್ಷ ರು., ಬ್ಯಾಲಹಳ್ಳಿ ಏತ ನೀರಾವರಿ ಯೋಜನೆಗೆ 1.07 ಕೋಟ್ಟಿ ರು. ವೆಚ್ಚ ಮಾಡಲಾಗುತ್ತಿದ್ದು, 360 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement