ಈ ಭಾರಿ ಬದಲಾವಣೆ ಅವಕಾಶ: ಡಿ.ಆರ್. ನಾರಾಯಣಸ್ವಾಮಿ
ವಿಜಯಪುರ: ದೇವನಹಳ್ಳಿ ಮೀಸಲು ಕ್ಷೇತ್ರದ ಬಿ.ಎಸ್.ಆರ್ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಹಲವಾರು ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿ ಪ್ರಚಾರ ನಡೆಸಿದರು. ಈ ಸಂಧರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಈ ಬಾರಿ ಕ್ಷೇತ್ರದಲ್ಲಿ ಜಯಭೇರಿ ಸಾಧಿಸುವುದು ಖಚಿತ. ಕ್ಷೇತ್ರದಲ್ಲಿ 270 ಹಳ್ಳಿಗಳಿದ್ದು ಎಲ್ಲಾ ಕಡೆ ಜನ ಸಾಮಾನ್ಯರು ಬೆಂಬಲ ಸೂಚಿಸುತ್ತಿದ್ದಾರೆ ಎಂದರು. ಜೆಡಿಎಸ್ ಮತ್ತು ಕಾಂಗ್ರೆಸ್‌ಗಳಿಗೆ ಆಶೀರ್ವದಿಸಿದ ಮತದಾರ ಈ ಬಾರಿ ಬಿಎಸ್‌ಆರ್ ಕಾಂಗ್ರೆಸ್‌ಗೆ ಆಶೀರ್ವದಿಸಲಿದ್ದಾರೆ ಎಂದು ತಿಳಿಸಿದರು. ಬೆಂ.ಗ್ರಾ.ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಬಿಎಸ್‌ಆರ್ ತಾಲೂಕು ಮುಖಂಡ ಕೆ.ಎಂ.ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ದೇವರಾಜ್, ತಾಲೂಕು ಎಸ್ಸಿ- ಎಸ್ಟಿ ಘಟಕದ ಸುರೇಶ್, ಉಪಾಧ್ಯಕ್ಷ ಸತೀಶ್, ಲಕ್ಷ್ಮಿ ನಾರಾಯಣ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.