ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ: ತೀವ್ರ ಗಾಯ
ಮಾಗಡಿ: ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವರುದ್ರಪ್ಪ ಮತ್ತು ಮಕ್ಕಳು ಸೇರಿ, ಕೆ.ಸಿ. ಬೃಂಗೇಶ್, ಆತನ ತಂದೆ, ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಧಮಿಕಿ ಹಾಕಿರುವ ಘಟನೆಯೂ ನಡೆದಿದೆ.
ತಾಲೂಕಿನ ಗುಡೇಮಾರನಹಳ್ಳಿ ಅಂಗಡಿಯೊಂದರಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದ್ದು, ಬೃಂಗೇಶ್, ಆತನ ತಂದೆ, ಚಿಕ್ಕಪ್ಪ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದ ಇವರೆಲ್ಲ ಹತ್ತಿರ ಸಂಬಂಧಿಗಳು. ತೀವ್ರವಾಗಿ ಗಾಯಗೊಂಡಿರುವ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬೃಂಗೇಶ್, ತಂದೆ ಪರಮಶಿವಯ್ಯ ಹಾಗೂ ಚಿಕ್ಕಪ್ಪ ಮಹದೇವಯ್ಯ ಅವರು ಕುದೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಈ ಸಂಬಂಧ ಕುದೂರು ಪಿಎಸ್ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.