ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿಗೆ ಇಂದು ಸಿಎಂ

Rashmi Kasaragodu
Updated On : 30 Apr 2013, 12:40 pm

ದೇವನಹಳ್ಳಿ:  ಬಿಜೆಪಿ ಅಭ್ಯರ್ಥಿ ಜಿ.ಚಂದ್ರಣ್ಣ ಪರವಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಂಗಳವಾರ ಬೆಳಗ್ಗೆ 10 ಗಂಟೆಗೆ ಇಲ್ಲಿನ ಹಳೇ ಬಸ್ ನಿಲ್ದಾಣದ ಮೈದಾನದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರರಾದ ಎಸ್.ರಮೇಶ್‌ರವರು ತಿಳಿಸಿದ್ದಾರೆ.
ತರಬೇತಿಗೆ ಗೈರು: ಮೊಕದ್ದಮೆ
ರಾಮನಗರ: ವಿಧಾನಸಭೆ ಚುನಾವಣೆ  ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳ ವಿರುದ್ಧ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.  ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಅಧಿಕಾರಿಗಳಿಗೆ ಚನ್ನಪಟ್ಟಣದಲ್ಲಿ ಏ.23ರಂದು ತರಬೇತಿ ನಡೆಯಿತು. ಗೈರಾದ ಸಿಬ್ಬಂದಿ ವಿರುದ್ಧ ಚುನಾವಣಾಧಿಕಾರಿ ದೂರಿನನ್ವಯ ಚನ್ನಪಟ್ಟಣ ಪುರ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚನ್ನಪಟ್ಟಣದ ಸಹಾಯಕ ಶಿಕ್ಷಕಿ ಕಮರ್ ಬಾನು, ಏಡೆಲ್ ಶಾಲೆ ಶಿಕ್ಷಕ ಆರ್.ನರಸಿಂಹಮೂರ್ತಿ,  ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆಯೆಷಾ ತಾಸೀನ್, ರೇಷ್ಮೆ ತರಬೇತಿ ಸಂಸ್ಥೆ ಅಧೀಕ್ಷಕ ಎಸ್.ಕೆ.ರಾಮಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಥಮ ದರ್ಜೆ ಸಹಾಯಕ ಸಿದ್ದಯ್ಯ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ದಂಡ ರಹಿತ ತೆರಿಗೆ: ಜೂ.30 ಕಡೆ ದಿನ
ರಾಮನಗರ: ನಗರಸಭೆ ವ್ಯಾಪ್ತಿಯ ಆಸ್ತಿದಾರರು ದಂಡ ರಹಿತವಾಗಿ ತೆರಿಗೆ ಪಾವತಿಸಲು ಜೂ.30 ಕಡೆಯ ದಿನವಾಗಿದೆ. ಏ.30ರೊಳಗೆ ಪಾವತಿಸುವ ಮೂಲಕ ಶೇಕಡ 5ರಷ್ಟು ರಿಯಾಯಿತಿ ಪಡೆಯಬಹುದಾಗಿದೆ ಎಂದು ಆಡಳಿತಾಧಿಕಾರಿ ಮತ್ತು ಆಯುಕ್ತರು ತಿಳಿಸಿದ್ದಾರೆ.  
ಎನ್‌ಸಿಇಆರ್‌ಟಿ ಪುಸ್ತಕ ಕಡ್ಡಾಯ
ರಾಮನಗರ: ಪದವಿ ಪೂರ್ವ ಕಾಲೇಜುಗಳ ಪಿಸಿಎಂಬಿ ವಿಭಾಗದ ವಿದ್ಯಾರ್ಥಿಗಳು ಪರೀಕ್ಷಾ ದೃಷ್ಟಿಯಿಂದ ಹೈದರಾಬಾದ್‌ನ ಆಕ್ಸ್‌ಫರ್ಡ್ ಪಬ್ಲಿಕೇಷನ್ಸ್‌ರವರ ಎನ್‌ಸಿಇಆರ್‌ಟಿ ಪುಸ್ತಕಗಳನ್ನೇ ಬಳಸುವುದು ಕಡ್ಡಾಯ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಜೆಡಿಎಸ್ ಪ್ರಮುಖರ ಉಚ್ಚಾಟನೆ
ವಿಜಯಪುರ: ಪಕ್ಷಕ್ಕೆ ರಾಜಿನಾಮೆ ನೀಡದೆ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆನ್ನಲಾದ ಪ್ರಮುಖರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಟೌನ್ ಜೆಡಿಎಸ್ ಅಧ್ಯಕ್ಷ ಎನ್. ನಾರಾಯಣಸ್ವಾಮಿ ತಿಳಿಸಿದರು. ಜೆಡಿಎಸ್‌ನ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆರ್. ಖಲೀಂಪಾಷ, ತಾಲೂಕು ಉಪಾಧ್ಯಕ್ಷ ಆಗಾಜಾನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ರಿಯಾಜ್ ಅಹಮದ್, ಟೌನ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ  ಎಜಾಜ್ ಅಹಮದ್, ಟೌನ್ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪಿ.ಪ್ರಕಾಶ್ ಹಾಗೂ ಶ್ರೀರಾಮ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಉಚ್ಚಾಟನೆಗೆ ಒಳಗಾದವರು ಇಂದಿನಿಂದ 6 ವರ್ಷಗಳ ಕಾಲ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಾಗಲಿ ಪಕ್ಷದ ವತಿಯಿಂದ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಾದಯಾತ್ರೆ
ದೊಡ್ಡಬಳ್ಳಾಪುರ:  ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಚರಹಳ್ಳಿ, ಲಿಂಗನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು. ಪಕ್ಷದ ಅಭ್ಯರ್ಥಿಯಾಗಿರುವ ಟಿ.ವೆಂಕಟರಮಣಯ್ಯ ಅವರಿಗೆ ಮತ ನೀಡುವಂತೆ ಮತ್ತು ಕಾಂಗ್ರೆಸ್  ಬೆಂಬಲಿಸುವಂತೆ ಮನವಿ ಮಾಡಿದ ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಮುಖಂಡರು, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಪಕ್ಷದ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement