ಬಿಎಸ್ಪಿ ಅಭ್ಯರ್ಥಿ ಜಾಫರ್ ಪಾಷಾ ಮತಯಾಚನೆ
ಮಾಗಡಿ: ಚುನಾವಣೆಗಳು ನಾಡಿನ ಜನತೆಯ ಬದುಕು ಮತ್ತು ಬದಲಾವಣೆಗಳನ್ನು ನಿರ್ಧರಿಸುತ್ತವೆ ಎಂದು ಬಿಎಸ್ಪಿ ಅಭ್ಯರ್ಥಿ ಜಾಫರ್ ಪಾಷಾ ನುಡಿದರು. ಅವರು ತಾಲೂಕಿನ ಕುದೂರು ಹೋಬಳಿ ಮರೂರು ಗ್ರಾಮದ ಮನೆ, ಮನೆಗೆ ತೆರಳಿ ಮತಯಾಚಿಸಿ ಮಾತನಾಡುತ್ತಾ ಬಿಎಸ್ಪಿ ನಾಯಕಿ ಮಾಯಾವತಿ ಶೋಷಿತರ ಧ್ವನಿಯಾಗಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ, ತಮ್ಮ ಹಕ್ಕುಗಳಿಗೆ ಈ ಬಾರಿ ಮಾಯಾವತಿ ಅವರ ಕೈ ಬಲಪಡಿಸಲು ಕ್ಷೇತ್ರದ ಅಭ್ಯರ್ಥಿಯಾದ ನನಗೆ ಮತ ನೀಡಿ ಗೆಲ್ಲಿಸುವಂತೆ ಜಾಫರ್ ಪಾಷಾ ಮತದಾರರಲ್ಲಿ ಮನವಿ ಮಾಡಿಕೊಂಡರು. ಜಯಣ್ಣ, ಮೂರ್ತಿ,ನಾಗರಾಜು ಇತರರು ಇದ್ದರು.