ಬಿಜೆಪಿಗೆ ನೂರಕ್ಕೂ ಹೆಚ್ಚು ಸ್ಥಾನ: ನಾಗರಾಜು
ಕ.ಪ್ರ.ವಾರ್ತೆ ಕನಕಪುರ ಏ.29
ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲುವ ಮುನ್ನವೇ ಕಾಂಗ್ರೆಸ್ನಲ್ಲಿ ಆರು ಮಂದಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಚ್ಚಾಡುತ್ತಿದ್ದಾರೆ, ಗುಪ್ತಚರ ವರದಿಯಂತೆ ರಾಜ್ಯದಲ್ಲಿ ಬಿಜೆಪಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಜಗದೀಶ ಶೆಟ್ಟರ್ ಮತ್ತೆ ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಕನಕಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ನಾಗರಾಜು ಹೇಳಿದ್ದಾರೆ. ಅ
ವರು ಕೋಡಿಹಳ್ಳಿ ಹೋಬಳಿಯ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡುತ್ತಾ ಮಾತನಾಡಿದರು. ಕಾಂಗ್ರೆಸ್ ಜೆಡಿಎಸ್ ಕೆಸರೆರೆಚಾಟದಲ್ಲಿ ತೊಡಗಿದ್ದು ಜನಹಿತವನ್ನು ಮರೆತಿವೆ. ವೈಯಕ್ತಿಕ ಹಿತಾಸಕ್ತಿಗಾಗಿ ಸ್ಪರ್ಧಿಸುತ್ತಿವೆ. ಬಿಜೆಪಿ ಸರ್ಕಾರ ಕನಕಪುರ ತಾಲೂಕಿಗೆ ಹೆಚ್ಚಿನ ಆದ್ಯತೆ ನೀಡಿ ನೂರಾರು ಕೋಟಿ ರು.ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಮಂಜೂರು ಮಾಡಿದೆ. ಅಭಿವೃದ್ಧಿಯ ಪರ್ಯಾಯ ಹೆಸರೇ ಬಿಜೆಪಿ ಎಂದು ನಾಗರಾಜು ನುಡಿದರು. ಬಿಜೆಪಿ ಮುಖಂಡರುಗಳಾದ ಶಿವಶಂಕರ್, ರೇಣುಕಪ್ಪ, ಶಿವರಾಜು,ಪ್ರದೀಪ, ಕುಮಾರ್, ಕೆಂಪರಾಜು, ಶಿವಲಿಂಗಪ್ಪ ಪಾಲ್ಗೊಂಡಿದ್ದರು.