ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭ್ರಷ್ಟ ಸರ್ಕಾರ ಕೊನೆಗಾಣಿಸಲು ನನ್ನ ಪತಿ ಕುಮಾರಸ್ವಾಮಿ ಯತ್ನ

Rashmi Kasaragodu
Updated On : 30 Apr 2013, 12:16 pm

ಚನ್ನಪಟ್ಟಣ: ರಾಜ್ಯದಲ್ಲಿನ ಭ್ರಷ್ಟ ಸರ್ಕಾರವನ್ನು ಕೊನೆಗಾಣಿಸಿ ಜನಹಿತ ಸರ್ಕಾರ ಸ್ಥಾಪಿಸಬೇಕೆಂಬ ಉದ್ದೇಶದಿಂದ ನನ್ನ ಪತಿ ಮತ್ತು ಮಾವ ನಿರಂತರವಾಗಿ ಹೋರಾಡುತ್ತಿದ್ದಾರೆ. ನನ್ನ ಪತಿಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಆದರೂ ಆರೋಗ್ಯ ಲೆಕ್ಕಿಸದೆ ಹೋರಾಡುತ್ತಿದ್ದಾರೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಕಣ್ಣೀರಿಟ್ಟರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ನನ್ನ ಮಾವ ಈ ಇಳಿವಯಸ್ಸಿನಲ್ಲೂ ಹೋರಾಡುವಂತ ಪರಿಸ್ಥಿತಿಯನ್ನು ಭ್ರಷ್ಟ ರಾಜಕೀಯ ಪಕ್ಷಗಳು ನಿರ್ಮಿಸಿವೆ. ನನ್ನ ಪತಿಯ ಆರೋಗ್ಯ ಸರಿ ಇಲ್ಲ, ನನಗೆ ಭಯ ಆಗುತ್ತದೆ. ಆದರೂ ಅವರು ಹೋರಾಟ ಬಿಟ್ಟಿಲ್ಲ ಎಂದು ಭಾವುಕರಾದರು.ನಾನು ಈ ತಾಲೂಕಿನಲ್ಲಿ ಬೆಳೆದವಳು, ನಿಮ್ಮ ಬಳಿ ನನ್ನ ನೋವನ್ನು ತೋಡಿ ಕೊಳ್ಳುತ್ತಿದ್ದೇನೆ ಎಂದರು. ಕಾವೇರಿ ಉಳಿವಿಗೆ ಅಧಿಕಾರದಲ್ಲಿರುವ ಪಕ್ಷಗಳು ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ. ಆದರೆ ನನ್ನ ಮಾವ ದೇವೇಗೌಡರು ಇಳಿವಯಸ್ಸಿನಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು. ರೈತರ ಮತಮಾತ್ರ ಕೇಳುವ ಇತರ ಪಕ್ಷಗಳು ರೈತರ ನೋವು ನಲಿವುಗಳ ಬಗ್ಗೆ ಯಾಕೆ ಪ್ರಶ್ನಿಸುವುದಿಲ್ಲ ಎಂದರು.
ನಿರಂತರ ಹೋರಾಟ: ನಮ್ಮ ಕುಟುಂಬ ರೈತರು ಕಡು ಬಡವರ ಹಿತ ಕಾಯಲು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಕುಮಾರಸ್ವಾಮಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ. ಈ ರಾಜ್ಯದ ಜನತೆಯ ಹಿತಕ್ಕಾಗಿ ಊಟ ನಿದ್ರೆ ಬಿಟ್ಟು ಹೋರಾಡುತ್ತಿರುವ ಜೆಡಿಎಸ್ ಬೆಂಬಲಕ್ಕೆ ನಿಲ್ಲಬೇಕೆಂದು ಅವರು ಮನವಿ ಮಾಡಿದರು.
ಜನತೆ ಬೆಂಬಲಿಸುತ್ತಾರೆ: ತಾಲೂಕಿನ ಜನತೆ ನನ್ನನ್ನು ಮನೆ ಮಗಳಂತೆ ಕಂಡಿದ್ದಾರೆ. ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿದಾಗ ಜನತೆ ಅಕ್ಕರೆ ಅಭಿಮಾನದಿಂದ ನನ್ನನ್ನು ಸ್ವಾಗತಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು. ಕ್ಷೇತ್ರದ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement