ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಳೆಗೆ ಉರುಳಿದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ

Rashmi Kasaragodu
Updated On : 30 Apr 2013, 11:38 am

ಮಾಗಡಿ: ತಾಲೂಕಿನಲ್ಲಿ  ಬಿದ್ದ  ಭರಣಿ ಮಳೆಗೆ ಮರಗಳು ಧರೆಗೆ ಉರುಳಿವೆ. ಗುಡುಗು, ಸಿಡಿಲು,ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ. ಬಾರಿ ಬಿರುಗಾಳಿ ಬೀಸಿದ್ದರಿಂದ ರಸ್ತೆ ಬದಿಯಲ್ಲಿನ  ಬೃಹತ್ತಾದ ಮಾವು, ಆಲ, ಹಲಸು, ಬೇವು ಇತರೆ ಜಾತಿಯ    ಮರಗಳು ಧರೆಗೆ ಉರುಳಿವೆ. ಇದರಿಂದಾಗಿ ಕೆಲ ಕಾಲ ರಸ್ತೆ  ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.  ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಅರಣ್ಯ ಇಲಾಖೆ ಕೂಡಲೆ ಕಾರ್ಯಪ್ರವೃತ್ತರಾಗಿ ಧರೆಗೆ ಉರಿಳಿದ ಮರ ಸ್ಥಳಾಂತರಕ್ಕೆ ಮುಂದಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಳೆದ ನಾಲ್ಕು ತಿಂಗಳಿನಿಂದ ಬಿರುಬಿಸಿಲಿಗೆ ಬಸವಳಿದಿದ್ದ ಜನತೆಗೆ ಭರಣೆ ಮಳೆ ಸುರಿದು ಸಂತಸ ಮೂಡಿದೆ. ಇತ್ತ  ಬಹುತೇಕ ರೈತರು ಭರಣೆ ಮಳೆಗೆ ಧರಣೆ ಉಳುಮೆಗೆ ಸಜ್ಜಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement