'ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಿ'
ಕ.ಪ್ರ.ವಾರ್ತೆ ಮಾಗಡಿ ಏ.30 ಕ್ಷೇತ್ರದ ಅಭಿವೃದ್ಧಿ ಬೇಕಾದರೆ, ಜೆಡಿಎಸ್ ಅಭ್ಯರ್ಥಿಯಾದ ನನಗೆ ಮತ ಹಾಕಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಮತದಾರರಲ್ಲಿ ಮನವಿ ಮಾಡಿದರು.
ಅವರು ಮಾಗಡಿ ಪಟ್ಣದ ರಾಜೀವ್ ಗಾಂಧಿ ನಗರದ ಕಾಲೋನಿಯಲ್ಲಿ ಮನೆ, ಮನೆಗೆ ತೆರಳಿ ಮತಯಾಚಿಸುತ್ತಾ ಮತದಾರರನ್ನುದ್ದೇಶಿಸಿ ಮಾತನಾಡಿದರು. ಜೆಡಿಎಸ್ನಿಂದ ಮಾತ್ರ ಕ್ಷೇತ್ರ ಅಭಿವೃದ್ಧಿ ಸಾಧ್ಯ. ಕುಡಿಯುವ ನೀರು, ಚರಂಡಿ, ಬೀದಿ ದೀಪ, ಸೂರು ಬೇಕಾದರೆ ಜೆಡಿಎಸ್ಗೆ ಮತಹಾಕಿ ಎಂದರು.
ಇನಾಯಿತ್ ಖಾನ್, ಮೈಕೆಲ್, ಪುರಸಭಾ ಮುಜಿ ಅಧ್ಯಕ್ಷ ನಾಗರಾಜು, ರೂಪೇಶ್, ಮೂರ್ತಿ, ನರಸಿಂಹಮೂರ್ತಿ, ಜಯರಾಮು, ಸಿದ್ದಪ್ಪ, ಪೆರಮಾಳ್, ರಾಜು, ಶಂಕರ್, ವಿಜಯಕುಮಾರ್, ರಾಜಶೇಖರ್, ಗುರು, ಜಯರಾಮಯ್ಯ, ಪುರಸಭಾ ಸದಸ್ಯ ನಾಗೇಂದ್ರ,ಜಯಮ್ಮ ಇದ್ದರು.