ದಲಿತ ಸೇನೆ ಮುಖಂಡ ಬಿಜೆಪಿಗೆ
ಸೂಲಿಬೆಲೆ: ಪಟ್ಟಣದ ಅಂಬೇಡ್ಕರ್ ನಗರದ ದಲಿತ ಸೇನೆ ಜಿಲ್ಲಾ ಮುಖಂಡ ಎಸ್.ಎ. ರಘುನಾಥ್ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾದರು.ಮಂಗಳವಾರ ಸೂಲಿಬೆಲೆಯಲ್ಲಿ ಬಿಜೆಪಿ ಯುವ ಮುಖಂಡ ಬಿ.ಜಿ. ನಾರಾಯಣಗೌಡರ ಸಮ್ಮುಖದಲ್ಲಿ ದಲಿತ ಸೇನೆಯ ಜಿಲ್ಲಾ ಮುಖಂಡರೊಂದಿಗೆ ತಾಲೂಕು ಮುಖಂಡ ಚಿಕ್ಕ ನರಸಿಂಹ, ಲೋಕೇಶ್ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಬಿ.ಜಿ. ನಾರಾಯಣಗೌಡರ ಜನಪರವಾದ ಕಾಳಜಿಯನ್ನು ಹೊಂದಿರುವ ಬಿಜೆಪಿ ಪರವಾಗಿ ದುಡಿದ ಅಭ್ಯರ್ಥಿಯನ್ನು ಗೆಲ್ಲಿಸಿ, ಹೊಸಕೋಟೆ ಕ್ಷೇತ್ರ ಜಾತಿ ವ್ಯವಸ್ಥೆಯಿಂದ ದೂರವಾಗಿ ಶಾಂತಿ ನೆಮ್ಮದಿಯಿಂದ ಇರಲು ಹಾಗೂ ಸಮಗ್ರ ಅಭಿವೃದ್ಧಿಗಾಗಿ ಬಚ್ಚೇಗೌಡರ ಗೆಲವಿಗಾಗಿ ಪ್ರತಿಯೊಬ್ಬರು ದುಡಿಯಬೇಕು ಎಂದು ಕರೆ ನೀಡಿದರು. ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ, ಮಾಜಿ ಅಧ್ಯಕ್ಷ ಜನಾರ್ದನ್ ರೆಡ್ಡಿ, ಮುಖಂಡರಾದ ಆಯೂಬ್ ಖಾನ್, ಟೈಲರ್ ನಾರಾಯಣಪ್ಪ, ರಾಮಯ್ಯ, ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ರಾಮಪ್ಪ, ರಮೇಶ್, ಗಂಗಪ್ಪ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.