ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಧರೆಗಿಳಿಯದ ಹೆಲಿಕಾಪ್ಟರ್: ಚಿರು ಫ್ಯಾನ್ಸ್‌ಗೆ ನಿರಾಶೆ

Rashmi Kasaragodu
Updated On : 1 May 2013, 12:52 pm

ಕ.ಪ್ರ. ವಾರ್ತೆ  ಆನೇಕಲ್  ಏ.30
ಆನೇಕಲ್  ಬ್ಲಾಕ್ ಕಾಂಗ್ರೆಸ್ ಮಂಗಳವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಗೆ ಆಂಧ್ರ ಸಿಎಂ ಕಿರಣ್, ಕಾಂಗೈ ಮುಖಂಡ ಡಿಕೆಶಿ ಜೊತೆಗೆ ತೆಲುಗು ಚಿತ್ರನಟ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಮತ್ತು ಕನ್ನಡ ಚಿತ್ರ ನಟಿ ರಮ್ಯ ಬರುತ್ತಾರೆಂದು ಕಾಂಗ್ರೆಸ್ ಕಾರ್ಯಕರ್ತರು ಬೆಳಗ್ಗಿನಿಂದ ಭರ್ಜರಿ ಪ್ರಚಾರ ನೀಡಿದ್ದರು.
ಮಧ್ಯಾಹ್ನದ ಬಿಸಿಲು ಏರಿದ್ದರೂ ಚಿರಂಜೀವಿ ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ಣಾರೆ ನೋಡಿ ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಕಾದು ಕುಳಿತರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಹಾರಾಡಿದಾಗ ಇನ್ನೇನು ಬಂದೇ ಬಿಟ್ಟರು ಎಂಬ ಸಂಭ್ರಮದಲ್ಲಿ ವೇದಿಕೆ ಸನಿಹದ ಚಿಕ್ಕ ಕೆರೆ ಮೈದಾನದ ಹೆಲಿಪ್ಯಾಡ್ ಬಳಿ ಜಮಾಯಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಸಫಲರಾದರು.  ಆಕಾಶದಲ್ಲಿ ಮೂರ್ನಾಲ್ಕು ಸುತ್ತು ಹೊಡೆದ ಕಾಪ್ಟರ್ ಮಾತ್ರ ಧರೆಗಿಳಿಯಲಿಲ್ಲ. ಸಿಗ್ನಲ್ ಸಿಗದ ಕಾರಣ ಭೂ ಸ್ಪರ್ಷವಾಗುತ್ತಿಲ್ಲ ಎಂಬ ಗಾಳಿ ಸುದ್ದಿ ಅಭಿಮಾನಿಗಳನ್ನು ಸ್ವಲ್ಪ ಕಾಲ ಆತಂಕಕ್ಕೀಡು ಮಾಡಿತ್ತು.  ನಿರಾಶರಾದ ಅಭಿಮಾನಿಗಳು ತಮ್ಮ ಅಭಿಮಾನಿ ನಟನನ್ನು   ನೇರವಾಗಿ ನೋಡಬಹುದೆಂಬ ಆಶಯದೊಂದಿಗೆ ವೇದಿಕೆ ಕಾರ್ಯಕ್ರಮದತ್ತ ದೌಡಾಯಿಸಿ ಬಂದರು. ವಿಶೇಷವಾದ ಬಸ್‌ನಲ್ಲಿ ಇಳಿದ ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ಮತ್ತು ಸಚಿವರು ವೇದಿಕೆಯತ್ತ ಬಂದಾಗ ಜನರಿಗೆ ತುಂಬಾ ನಿರಾಶೆಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement