ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೀರಾವರಿ ಯೋಜನೆ ವಿಳಂಬಕ್ಕೆ ಜೆಡಿಎಸ್ ಕಾರಣ: ಮೊಯ್ಲಿ

Rashmi Kasaragodu
Updated On : 1 May 2013, 11:59 am

ನೆಲಮಂಗಲ: ರಾಜ್ಯದಲ್ಲಿನ ಹಲವಾರು ನೀರಾವರಿ ಯೋಜನೆಗಳು ವಿಳಂಬವಾಗಲು ಜೆಡಿಎಸ್‌ನ ನಾಯಕರೇ ಮೂಲ ಕಾರಣರಾಗಿದ್ದಾರೆ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಆರೋಪಿಸಿದರು.
ಅವರು ಮಂಗಳವಾರ ವಿಧಾನಸಭೆ ಕ್ಷೇತ್ರದ ತ್ಯಾಮಗೊಂಡ್ಲು, ಸೋಂಪುರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜನಮೂರ್ತಿ ಪರ ಮತಯಾಚಿಸಿ ಮಾತನಾಡುತ್ತಾ  ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದ ವೇಳೆ ಕುಮಾರಸ್ವಾಮಿ ಅಧಿಕಾರದ ಆಸೆಗಾಗಿ ಬಿಜೆಪಿ ಜೊತೆ ಸೇರಿ  ಮುಖ್ಯಮಂತ್ರಿ ಪದವಿಯನ್ನು ಪಡೆದುಕೊಂಡು ಅವಧಿ ಮುಗಿದ ಮೇಲೆ ಅಧಿಕಾರ ಹಸ್ತಾಂತರ ಮಾಡದೆ ವಚನ ಭ್ರಷ್ಟರಾದರು. ಈ ಅಂಶವನ್ನೆ ಮುಂದು ಮಾಡಿಕೊಂಡು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರದ ಹಣವನ್ನು ತಿಂದು ಸಾಲದೆಂಬಂತೆ ಜೈಲು ಸೇರಿದರು. ಈಗ ಕರ್ನಾಟಕ ಜನತಾ ಪಕ್ಷ ಕಟ್ಟಿರುವುದು. ಹಾಸ್ಯಾಸ್ಪದವಾಗಿದೆ. ಆದುದರಿಂದ ಕರ್ನಾಟಕವನ್ನು ಉಳಿಸಲು ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement