ಬಿಜೆಪಿಗೆ ಮತ ನೀಡಿ: ಜಗದೀಶ್ ಪ್ರಸಾದ್ ಮನವಿ
ಮಾಗಡಿ: ಕ್ಷೇತ್ರದ ಅಭಿವೃದ್ಧಿಗಾಗಿ 600 ಕೋಟಿ ರು. ಅನುದಾನ ಬಿಡುಗಡೆ ಮಾಡಿದ ಬಿಜೆಪಿ ಪಕ್ಷಕ್ಕೆ ಮತಹಾಕುವಂತೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಂ. ಧನಂಜಯ ಮತದಾರರಲ್ಲಿ ಮನವಿ ಮಾಡಿದರು.ಅವರು ಮಾಗಡಿ ಪಟ್ಟಣದ ಜೋತಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಪ್ರಸಾದ್ ಪರವಾಗಿ ಮತಯಾಚಿಸುತ್ತಾ ಮತ್ತಷ್ಟು ಕ್ಷೇತ್ರದ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಮನೆ ಮನೆ, ತೆರಳಿ ಮತಯಾಚಿಸಿದರು. ಹಿಂದೆ ಗೆದ್ದವರು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮಾಗಡಿ ಅಭಿವೃದ್ಧಿ ಕಂಡಿಲ್ಲ, ಕೋಟಿ ಕೋಟಿ ದುರುಪಯೋಗವಾಗಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮಾಗಡಿಯನ್ನಾಗಿಸಲು ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ತಾಲೂಕು ಬಿಜೆಪಿ ಉಪಾಧ್ಯಕ್ಷ ಹಾಗು ಆಶ್ರಯ ಸಮಿತಿ ಸದಸ್ಯ ಟಿ.ಆರ್. ದಯಾನಂದ್ ತಿಳಿಸಿದರು.