ಅಲ್ಯುಮಿನಿಯಂ ತಂತಿ ಕಳವು
ಕೆಜಿಎಫ್: ಬೆಸ್ಕಾಂ ಇಲಾಖೆಗೆ ಸೇರಿದ ವಿದ್ಯುತ್ ಕಂಬಗಳು ಹಾಗೂ ಅಲ್ಯುಮಿನಿಯಂ ತಂತಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿದೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕಂಬಂಪಲ್ಲಿ ಗ್ರಾಮದ ದಿವಾನ್ ಎಸ್ಟೇಟ್ ಬಳಿ ಇರುವ ಪಾಲುಬಿದ್ದ ಜಮೀನಿನಲ್ಲಿ ಅಳವಡಿಸಿದ್ದ ಎರಡು ವಿತ್ಯುತ್ ಕಂಬಗಳು ಹಾಗೂ ಅಲ್ಯುಮಿನಿಯಂ ತಂತಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಬೆಸ್ಕಾಂ ಅಧಿಕಾರಿ ಆಂಜಿನಯ್ಯ ಎಂಬವರ ಮೊಬೈಲ್ಗೆ ಕರೆ ಮಾಡಿ ತಿಳಿಸಿದ್ದರು. ಆಂಜನಯ್ಯ ಕೂಡಲೇ ಕಂಬಂಪಲ್ಲಿ ದಿವಾನ್ ಎಸ್ಟೇಟ್ ಬಳಿ ಇರುವ ಜಮೀನಿನಲ್ಲಿ ಪರಿಶೀಲಿಸಿದಾಗಿ ಎರಡು ವಿದ್ಯುತ್ ಕಂಬಗಳು ಹಾಗೂ ಸುಮಾರು 30000 ಬೆಲೆ ಬಾಳುವ ಅಲುಮಿನಿಯಂ ತಂತಿಗಳನ್ನು ಕಳವು ಆಗಿರುವುದು ತಿಳಿದುಬಂದಿದೆ. ಬೆಸ್ಕಾಂ ಅಧಿಕಾರಿಗಳಾದ ಶ್ರೀನಿವಾಸಗೌಡ, ಮೋಸಸ್, ಲೈನ್ಮೆನ್ ಬಾಬು ಅವರು ಕಂಬಂಪಲ್ಲಿ ಪ್ರದೇಶದಲ್ಲಿ ಹುಡಿಕಿದಾಗ ಕಳುವಾದ 2 ವಿದ್ಯುತ್ ಕಂಬಗಳ ಪೈಕಿ ಒಂದು ದಿವಾನ್ ಎಸ್ಟೇಟ್ನಲ್ಲಿ ಹಾಗೂ ಮತ್ತೊಂದು ಕೃಷ್ಣಾರೆಡ್ಡಿ ಎಂಬವರ ಜಮೀನಿನಲ್ಲಿ ನೆಟ್ಟಿರುವುದು ಕಂಡುಬಂದಿರುವುದಾಗಿ ಬೆಸ್ಕಾಂ ಶಾಖಾಧಿಕಾರಿ ಆಂಜನಯ್ಯ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬೇತಮಂಗಲ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.