ಕ್ಷೀರ ಭಾಗ್ಯ ಯೋಜನೆಗೆ ಚಾಲನೆ
ನೆಲಮಂಗಲ: ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾಗಿರುವ ಶಾಲಾ ಮಕ್ಕಳಿಗಾಗಿ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಗೆ ಪುರಸಭಾ ಸದಸ್ಯ ಎನ್.ಗಣೇಶ್ ಚಾಲನೆ ನೀಡಿದರು.
ಅವರು ಸೋಮವಾರ ಪಟ್ಟಣದ ಜ್ಞಾನವಾಹಿನಿ ವಿದ್ಯಾಕೇಂದ್ರ ಶಾಲೆಯಲ್ಲಿ ಸರ್ಕಾರದ ಜನಪ್ರಿಯ ಯೋಜನಯಿಂದ ಕ್ಷೀರ ಭಾಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ಸಾಮಾನ್ಯವಾಗಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬದವರ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರ ಆರೋಗ್ಯದಿಂದಿರಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ ಎಂದರು.
ಪ್ರತಿಯೊಬ್ಬರಿಗೂ 150 ಮಿಲಿ ಲೀಟರ್ ಹಾಲು ವಿತರಿಸಲಾಗುತ್ತದೆ. ಶಾಲೆಗಳಲ್ಲಿ ಹಾಲು ಶೇಖರಣೆ ಮಾಡುವ ಪಾತ್ರೆಗಳು ಶುಚಿಯಿಂದ ಇರಬೇಕು. ಇದರ ಬಗ್ಗೆ ಮುಖ್ಯ ಶಿಕ್ಷಕರು ಗಮನ ಕೊಡಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ್ ಹೇಳಿದರು. ಪುರಸಭಾ ಸದಸ್ಯೆ ರಾಧಾಬಾಯಿ, ಮುಖ್ಯೋಪಾಧ್ಯಾಯ ಆರ್.ನಾಗರಾಜು, ಸಂಸ್ಥೆಯ ಗೌರವಾಧ್ಯಕ್ಷ ಸರ್ವೋತ್ತಮ್, ಶಿವಾಜಿರಾವ್ ಶಿಂಧೆ ಇದ್ದರು.