ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಗುಣಮಟ್ಟದ ಚಿತ್ರಗಳು ತಯಾರಾಗಲಿ'

Rashmi Kasaragodu
Updated On : 6 Aug 2013, 1:26 am

ಕ.ಪ್ರ.ವಾರ್ತೆ   ಆನೇಕಲ್ಲು   ಆ. 5
ಕನ್ನಡ ಚಿತ್ರರಂಗದಲ್ಲಿ ವರ್ಷಂಪ್ರತಿ ಹಲವಾರು ಚಿತ್ರಗಳು ತಯಾರಾದರೂ ಗುಣಮಟ್ಟದ ಕೆಲವೇ ಚಿತ್ರಗಳು 100 ದಿನ ಆಚರಿಸುತ್ತದೆ. 50 ದಿನಗಳು ಕನ್ನಡ ಚಿತ್ರ ಓಡಿದರೆ ಅದೇ ಒಂದು ದಾಖಲೆಯಂತೆ ಬಿಂಬಿಸಲಾಗುತ್ತದೆ. ಪ್ರೇಕ್ಷಕನ ನಾಡಿ ಮಿಡಿತ ಅರಿತು ಕುಟುಂಬ ಸಹಿತ ಕುಳಿತು ನೋಡುವ ಚಿತ್ರಗಳು ತಯಾರಾಗಬೇಕಿದೆ ಎಂದು ನಿರ್ಮಾಪಕ ಮನೋಹರ್ ತಿಳಿಸಿದ್ದಾರೆ.
ಅವರು ನಗರದ ಹೊರವಲಯದಲ್ಲಿ ಕರ್ನಾಟಕ ಚಲನ ಚಿತ್ರ ನಿರ್ಮಾಪಕರ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ  ಮಾತನಾಡಿ ಪರಭಾಷಾ ತಾರೆಯರಿಗೆ ಆದ್ಯತೆ ನೀಡುವುದನ್ನು ವಿರೋಧಿಸುತ್ತೇನೆ. ಕನ್ನಡದಲ್ಲೇ ಸಾಕಷ್ಟು ಪ್ರತಿಭಾನ್ವಿತರಿದ್ದು ಆಮದು ನಟಿಯರಿಗೆ ಮಣೆ ಹಾಕುವುದು ಸರಿಯಲ್ಲ. ಕನ್ನಡ ಚಿತ್ರರಂಗದಲ್ಲಿ ನೂತನ ಪ್ರಯೋಗಗಳು ಕಡಿಮೆಯೇನಿಲ್ಲ. ಆದರೇ ಮಾರುಕಟ್ಟೆ ಚಿಕ್ಕದಿದ್ದು ಪೈಪೋಟಿ ಹೆಚ್ಚಾಗಿದೆ ಎಂದರು.
ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಮಾತನಾಡಿ ತಂತ್ರಜ್ಞಾನದ ಕೊರತೆ ಇದ್ದ ಕಾಲದಲ್ಲಿ ಕುಟುಂಬ ವಾತ್ಸಲ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಗುರುತಿಸುವ ಚಿತ್ರಗಳು ಹಾಗೂ ಹಾಡುಗಳು ಮೂಡಿ ಬರುತ್ತಿದ್ದವು. ಆಧುನಿಕ ಯುಗದಲ್ಲಿ ಕ್ರೌರ್ಯ ಹಿಂಸೆ, ಗ್ರಾಮೀಣ ಭಾಷೆ ಬಳಕೆಯ ಆಕ್ರಮಣವಾಗಿ ಸದಭಿರುಚಿಯ ಚಿತ್ರಗಳು ತಯಾರಾಗುತ್ತಿಲ್ಲ.
ಕನ್ನಡಿಗರು ಸಂಸ್ಕಾರವಂತರು ಹಾಗೂ ಉತ್ತಮ ಪರಂಪರೆ ಉಳ್ಳವರು. ಕನ್ನಡ ಚಿತ್ರಗಳಿಗೆ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವ ಗುಣಮಟ್ಟ ಕಾಣೆಯಾಗಿದೆ. ಹೊಸಬರ ಸೇರ್ಪಡೆ, ತಂತ್ರಜ್ಞಾನದ ಬಳಕೆಯಿಂದ ನೂತನ ಆವಿಷ್ಕಾರಗಳು ಬರಬೇಕಿದೆ ಎಂದರು.
ಗಂಗರಾಜು ಮಾತನಾಡಿ ಚಿತ್ರಗಳು ತಯಾರಾಗುವ ಮುನ್ನವೇ ಟೈಟಲ್ ಹಂತದಿಂದಲೇ ಕೋರ್ಟ್ ಮೆಟ್ಟಿಲೇರುವ ಕೆಟ್ಟ ಪ್ರಚಾರದಿಂದ ಹಣ ಮಾಡುವ ಕೆಟ್ಟ ಸಂಪ್ರದಾಯ ಕನ್ನಡ ಚಿತ್ರರಂಗದಿಂದ ಮರೆಯಾಗಬೇಕು. ರಂಗಭೂಮಿ, ಕಿರುತೆರೆಯ ಸ್ಪರ್ಧೆ ನಡುವೆ ಬೆಳ್ಳಿ ತೆರೆಯ ಮೇಲಿನ ಚಿತ್ರಗಳು ಸೊರಗಲಾರಂಭಿಸಿದೆ. ಪರಭಾಷಾ ಚಿತ್ರಗಳು ರಾಜ್ಯಾದ್ಯಂತ ತೆರೆ ಕಾಣುತ್ತವೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದು ದಿಟ್ಟ ನಿರ್ಧಾರ ಕೈಗೊಳ್ಳುವ ರಾಜಕಾರಣ ರಹಿತ ಸಮಿತಿ ರಚನೆಯಾಗಬೇಕಿದೆ ಎಂದರು. ವೇದಿಕೆಯಲ್ಲಿ ಉಮೇಶ್ ಬಣಕಾರ್, ನಟಿ ರಮ್ಯ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement