ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕರ್ತವ್ಯ ಪ್ರಜ್ಞೆಯಿಂದ ದೇಶ ಕಟ್ಟಬಹುದು

Rashmi Kasaragodu
Updated On : 7 Aug 2013, 1:14 am

ಕ.ಪ್ರ.ವಾರ್ತ್ಣೆ ದೊಡ್ಡಬಳ್ಳಾಪುರ್ಣ ಆ.6
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕದ ನೇತೃತ್ವದಲ್ಲಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಸಮಿತಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆರ್ಎಸ್ಎಸ್ನ ವಿವೇಕಾನಂದ ಚಿಂತನೆಗಳ ಪ್ರಚಾರಕ ಸಂತೋಷ್ ಮಾತನಾಡಿದರು. ಅಧ್ಯಾಪಕರ ಕರ್ತವ್ಯಪರತೆ, ವಿದ್ಯಾರ್ಥಿಗಳ ಅನನ್ಯ ಶ್ರದ್ಧೆಯಿಂದ ಸುಭದ್ರ ರಾಷ್ಟ್ರ ಕಟ್ಟಬಹುದೇ ಹೊರತು ಭವ್ಯ ಕಟ್ಟಡಗಳಿಂದಲ್ಲ. ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಮರ್ಪಣಾ ಮನೋಭಾವದಿಂದ ದುಡಿಯುತ್ತಿರುವ ಡಾ.ಸುದರ್ಶನ್, ಡಾ.ಬಾಲಸುಬ್ರಹ್ಮಣ್ಯಂ ಅವರು ವಿವೇಕಾನಂದರ ಆದರ್ಶಗಳ ಹಿನ್ನೆಲೆಯಲ್ಲೇ ಅನುಕರಣೀಯ ಬದುಕು ಸಾಗಿಸುತ್ತಿರುವುದು ಜ್ವಲಂತ ಉದಾಹರಣೆ. ಸೇವಾಪರತೆ, ಪ್ರೀತಿ, ಉದಾರತೆ, ಮಾನವೀಯತೆಗಳೇ ನಿಜವಾದ ದೇಶಾಭಿಮಾನ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಅಧಿಕಾರಿ ಜಿ.ಶ್ರೀನಿವಾಸ್, ಪ್ರಾಧ್ಯಾಪಕ ಸಿ.ರಾಮಚಂದ್ರ, ಎನ್.ಶ್ರೀನಿವಾಸಯ್ಯ, ಸುರೇಶ್ಕುಮಾರ್, ರಾಜೇಶ್, ರಘುಕುಮಾರ್, ಸಂಧ್ಯಾರಾಣಿ, ಸಿದ್ಧರಾಮಯ್ಯ, ಲಕ್ಷ್ಮೀಶ, ಪ್ರಶಾಂತ್, ಆರ್ಎಸ್ಎಸ್ನ ಅಶ್ವತ್ಥ್, ಅಮರನಾಥ್, ರಘುನಾಥ್, ಅಕ್ಷಯ್, ಯಶವಂತ್ ಮತ್ತಿತರರು ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement