ಗ್ಯಾಸ್ ಸಿಲಿಂಡರ್ಗೆ ಹೆಚ್ಚುವರಿ ಹಣ ನೀಡಬೇಡಿ
ವಿಜಯಪುರ: ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ನಿಗದಿತ ಹಣಕ್ಕಿಂತಲೂ ಹೆಚ್ಚಿನ ಹಣ ನೀಡಬೇಕು ಎಂದು ಕಡ್ಡಾಯವಾಗಿ ಕಸಿದು ಕೊಳ್ಳುತ್ತಿರುವುದು ಪಟ್ಟಣದಲ್ಲಿ ದಂಧೆಯಾಗಿ ಪರಿಣಮಿಸಿದೆ ಎಂದು ಕರವೇ ಹೋಬಳಿ ಅಧ್ಯಕ್ಷ ಎಂ.ಮಹೇಶ್ ಆಕ್ರೋಶ ವ್ಯಕ್ತ ಪಡಿಸಿದರು. ಅವರು ಪಟ್ಟಣದ ಸಂಗಂ ಗ್ಯಾಸ್ ಏಜೆನ್ಸಿ ಕಚೇರಿ ಬಳಿ ಏಜೆನ್ಸಿ ಮಾಲೀಕರಿಗೆ ಸಾರ್ವಜನಿಕರ ಬಳಿ ಅಗತ್ಯಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಪತ್ರ ನೀಡುವ ಸಂದರ್ಭದಲ್ಲಿ ಮಾತನಾಡಿದರು. ಇನ್ನು ಮುಂದೆ ಸಾರ್ವಜನಿಕರ ಬಳಿ ಗ್ಯಾಸ್ ಸಿಲಿಂಡರ್ಗೆ ನಿಗದಿತ ದರಕ್ಕಿಂತ ಹೆಚ್ಚು ನೀಡಲು ಒತ್ತಾಯಿಸಿದರೆ, ಈ ಬಗ್ಗೆ ಕರಪತ್ರ ಹೊರಡಿಸಿ ಅನ್ಯಾಯದ ವಿರುದ್ಧ ಧರಣಿ ನಡೆಸುವುದಾಗಿ ಕರವೇ ಅಧ್ಯಕ್ಷ ಎಂ.ಮಹೇಶ್ ಎಚ್ಚರಿಸಿದರು.