ತಲೆ ಮೇಲೆ ಬೋರ್‌ವೆಲ್ ರಾಡ್‌ಬಿದ್ದು ರೈತ ಸ್ಥಳದಲ್ಲೇ ಸಾವು
ಆನೇಕಲ್ಲು: ಬೋರ್‌ವೆಲ್ ಕೊರೆಯುತ್ತಿದ್ದುದನ್ನು ನೋಡಲು ಕುತೂಹಲದಿಂದ ಹೋದ ರೈತನೊಬ್ಬನ ತಲೆಯ ಮೇಲೆ ಬೋರ್‌ವೆಲ್ ಯಂತ್ರದ ರಾಡ್ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಮಾಯಸಂದ ಅರೆಹಳ್ಳಿಯಲ್ಲಿ ನಡೆದಿದೆ. ಮಾರಪ್ಪ(42) ಮೃತಪಟ್ಟ ನತದೃಷ್ಟ ರೈತ. ಬೋರ್‌ವೆಲ್ ಕೊರೆಯುವ ಯಂತ್ರ ಒಂದರ ನಂತರ ಮತ್ತೊಂದು ಭೂಮಿಗಿಳಿಸುವ ರಾಡ್‌ಗಳನ್ನು ಪೂರೈಸುತ್ತಿತ್ತು. ಆಗ ಆಯ ತಪ್ಪಿದ ಡ್ರಿಲ್ಲಿಂಗ್ ರಾಡ್ ನೆಲಕ್ಕೆ ಬಿದ್ದಾಗ ಸ್ಥಳದಲ್ಲಿದ್ದ ಮಾರಪ್ಪನ ಮೇಲೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.