ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೆಲಮಂಗಲ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆ

Rashmi Kasaragodu
Updated On : 8 Aug 2013, 12:52 pm

ನೆಲಮಂಗಲ: ಸೋಂಪುರ ಹೋಬಳಿ ವ್ಯಾಪ್ತಿಯ ಅಗಳಕುಪ್ಪೆ ಗ್ರಾಮ ಪಂಚಾಯ್ತಿಗೆ ಸೇರಿದ ಲಕ್ಕೂರು ಗ್ರಾಮ ಪಂಚಾಯ್ತಿ ಮತಕ್ಷೇತ್ರ-1ಕ್ಕೆ ನಡೆದ ಉಪಚುನಾವಣೆಯಲ್ಲಿ  ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರೀಫ್‌ಖಾನ್ ಭರ್ಜರಿ ಜಯಗಳಿಸಿದ್ದಾರೆ.
ಲಕ್ಕೂರು ಕ್ಷೇತ್ರದ ಸದಸ್ಯ ಸೈಯದ್ ನಿಸಾರ್ ಅವರು ಅಪಘಾತದಲ್ಲಿ ನಿಧನ ಹೊಂದಿದ್ದರು. ಇವರ ನಿಧನದಿಂದ ತೆರವಾದ ಮತಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 508 ಮತದ ಗೆಲವು ಸಾಧಿಸಿದ್ದಾರೆ.
ಪ್ರತಿ ಸ್ಪರ್ಧಿಗಲಾದ ಸನಾವುಲ್ಲಾ-208, ಫಜಲ್ ರೆಹಮಾನ್-07, ಸಫೀರ್ ಅಹಮದ್-62 ಮತ ಪಡೆದಿದ್ದಾರೆ. 4 ಮತಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿ ಹನುಮಾನಾಯಕ್ ತಿಳಿಸಿದ್ದಾರೆ.
ವಿಜಯಿ ಆರೀಫ್‌ಖಾನ್ ಅವರನ್ನು ತಾ.ಪಂ. ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಅಗಳಕುಪ್ಪೆ ಗ್ರಾ.ಪಂ.ಅಧ್ಯಕ್ಷ ಎಲ್.ಎಸ್.ಪ್ರಕಾಶ್, ಮಾಜಿ ಅಧ್ಯಕ್ಷ ಖಲೀಂವುಲ್ಲಾ, ಕಾಂಗ್ರೇಸ್ ಮುಖಂಡ ಗೋವಿಂದರಾಜು, ಗ್ರಾಮ ಪಂಚಾಯ್ತಿ ಸದಸ್ಯರಾದ ಸಿದ್ದರಾಜು,  ಕೃಷ್ಣಪ್ಪ ನೂತನ ಸದಸ್ಯರಿಗೆ ಶುಭ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement