ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಇಲಾಖಾ ಪರೀಕ್ಷೆ
ರಾಮನಗರ: ಕರ್ನಾಟಕ ಲೋಕಸೇವಾ ಆಯೋಗದಿಂದ ಆ.10 ರಿಂದ 22ರವರೆಗೆ ನಡೆಯುವ 2013ನೇ ಸಾಲಿನ ಇಲಾಖಾ ಪರೀಕ್ಷೆಯು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಲೋಕಸಭಾ ಉಪ ಚುನಾವಣೆ ಕಾರ್ಯಕ್ಕೆ ಆ.12, 20, ಮತ್ತು 21 ರಂದು ಪದವಿ ಪೂರ್ವ ಕಾಲೇಜನ್ನು ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ದಿನಾಂಕಗಳಂದು ಇಲ್ಲಿ ನಡೆಯಬೇಕಿದ್ದ ಪರೀಕ್ಷೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲಾಗುತ್ತದೆ. ಈ ದಿನಗಳಂದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಲು ಡಯಟ್‌ನ ಉಪ ನಿರ್ದೇಶಕರು ತಿಳಿಸಿದ್ದಾರೆ. ಬೇರೆ ದಿನಾಂಕಗಳಂದು ಬದಲಾವಣೆ ಇರುವುದಿಲ್ಲ.